Bangalore, ಜನವರಿ 26 -- ಬೆಂಗಳೂರು: ಗಣರಾಜ್ಯೋತ್ಸವದಂದು ಶಿವರಾಜ್‌ ಕುಮಾರ್‌ ಕರ್ನಾಟಕಕ್ಕೆ ಮರಳುವ ಸುದ್ದಿ ತಿಳಿದು ಅಪಾರ ಅಭಿಮಾನಿಗಳು, ಆಪ್ತರು ವಿಮಾನ ನಿಲ್ದಾಣದ ಟೋಲ್‌ ಗೇಟ್‌ ಮುಂದೆ ನೆರೆದಿದ್ದರು. ಇಂದು ಬೆಳಗ್ಗೆ 9 ಗಂಟೆಯ ನಂತರ ಬೆಂಗಳೂರು ತಲುಪಿದ ಶಿವಣ್ಣನನ್ನು ಎಲ್ಲರೂ ಪ್ರೀತಿಯಿಂದ ಸ್ವಾಗತಿಸಿದರು. ಆಪಲ್‌ ಹಣ್ಣುಗಳ ಹಾರ ಹಾಕಿ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಸಿನಿಮಾ ರಂಗದ ಸೆಲೆಬ್ರಿಟಿಗಳೂ ಅಲ್ಲಿ ನೆರೆದಿದ್ದರು.

ಬೆಂಗಳೂರಿನ ತನ್ನ ನಿವಾಸದ ಬಳಿ ಮಾಧ್ಯಮಗಳ ಜತೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಮಾತನಾಡಿದ್ದಾರೆ. "ಚಿಕಿತ್ಸೆಗೆ ಅಮೆರಿಕಕ್ಕೆ ಹೋಗುವ ಸಂದರ್ಭದಲ್ಲಿ ಒಂದಿಷ್ಟು ಭಾವುಕನಾಗಿದ್ದೆ. ಭಯವೂ ಇತ್ತು. ವಿಮಾನದಲ್ಲಿ ಪ್ರಯಾಣ ಮಾಡುವ ಸಮಯದಲ್ಲಿಯೂ ತುಸು ಭಯವಿತ್ತು. ಜೀವನದಲ್ಲಿ ಏನೇ ಬರಲಿ, ಫೇಸ್‌ ಮಾಡೋಣ ಎಂದು ಧೈರ್ಯ ತೆಗೆದುಕೊಂಡು ಪ್ರಯಾಣಿಸಿದೆ. ಅಮೆರಿಕಕ್ಕೆ ಹೋದ ಮೇಲೆ ಭರವಸೆ ಹೆಚ್ಚಾಯಿತು. ಸರ್ಜರಿ ಮಾಡುವ ದಿನದಂದು ಕೂಡ ಭಯ ಇತ್ತು. ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಆರು ಗಂ...