Bangalore, ಮೇ 28 -- 2024ರ ಬ್ಲಿಂಕ್‌ ಬಳಿಕ ನಟಿ ಚೈತ್ರಾ ಜೆ ಆಚಾರ್‌ ನಟನೆಯ ಯಾವುದೇ ಸಿನಿಮಾವು ಬಿಡುಗಡೆಯಾಗಿಲ್ಲ. ಆದರೆ, ಇವರು ವಿವಿಧ ಪ್ರಾಜೆಕ್ಟ್‌ಗಳಲ್ಲಿ ಬಿಝಿಯಾಗಿದ್ದಾರೆ. ಚೈತ್ರಾ ನಟನೆಯ ಕೆಲವೊಂದು ಸಿನಿಮಾಗಳು ಶೀಘ್ರದಲ್ಲಿ ಬಿಡುಗಡೆಯಾಗಲಿವೆ. ತಮಿಳು ಚಿತ್ರರಂಗದಲ್ಲಿಯೂ ಚೈತ್ರಾ ಬಿಝಿಯಾಗಿದ್ದಾರೆ. ಜುಲೈ 4,2025ರಂದು ಸಿದ್ಧಾರ್ಥ್‌ ಜತೆಗೆ ನಟಿಸಿರುವ 3ಬಿಎಚ್‌ಕೆ ಸಿನಿಮಾ ರಿಲೀಸ್‌ ಆಗಲಿದೆ. ಈ ಸಿನಿಮಾದ ಮೂಲಕ ಅಧಿಕೃತವಾಗಿ ತಮಿಳಿಗೆ ಎಂಟ್ರಿ ನೀಡಲಿದ್ದಾರೆ. ಇದರೊಂದಿಗೆ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಸಿನಿಮಾವು ತಮಿಳಿಗೆ ಡಬ್‌ ಆಗಿ ರಿಲೀಸ್‌ ಆಗಲಿದೆ. ಇದರೊಂದಿಗೆ ಇನ್ನೊಂದು ತಮಿಳು ಸಿನಿಮಾ "ಮೈ ಲಾರ್ಡ್‌" ಕೂಡ ಬಿಡುಗಡೆಗೆ ಸಿದ್ಧವಾಗಿದೆ ಎಂದು ಒಟಿಟಿಪ್ಲೇ ಜತೆಗಿನ ಸಂದರ್ಶನದಲ್ಲಿ ಚೈತ್ರಾ ಜೆ ಆಚಾರ್‌ ಹೇಳಿದ್ದಾರೆ.

ಕರ್ನಾಟಕದಲ್ಲಿ ಕನ್ನಡದಲ್ಲಿ ಮಾರ್ನಮಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಿತ್ವಿಕ್‌ ಮಠದ್‌ ಜತೆ ನಟಿಸುತ್ತಿದ್ದಾರೆ. ಈ ನಟ ಅನುರೂಪ, ಗಿಣಿರಾಮ ಮುಂತಾದ ಸೀ...