Bengaluru, ಏಪ್ರಿಲ್ 22 -- ಅಮೃತಧಾರೆ ಸೀರಿಯಲ್‌ ಖ್ಯಾತಿನ ನಟಿ ಇಶಿಕಾ ವರ್ಷ ಇದೀಗ ವಿಶೇಷ ಎನಿಸುವ ಫೋಟೋಶೂಟ್‌ ಮೂಲಕ ಎದುರಾಗಿದ್ದಾರೆ.

ಸಾಂಪ್ರದಾಯಿಕ ಲಂಗ ದಾವಣಿಯಲ್ಲಿ ಬಗೆಬಗೆ ಪೋಸ್‌ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಇಶಿತಾ.

ಕರ್ನಾಟಕದಲ್ಲಿಯೇ ಈ ಫೋಟೋಶೂಟ್‌ ಮಾಡಿಸಿದ್ದರೆ ಅದು ಹೆಚ್ಚು ಮುನ್ನೆಲೆಗೆ ಬರುತ್ತಿತ್ತೋ ಇಲ್ಲವೋ. ಆದರೆ, ಇಶಿತಾ ಫೋಟೋಶೂಟ್‌ ಮಾಡಿಸಿದ್ದು ಆಫ್ರಿಕಾದಲ್ಲಿ.

ಆಫ್ರಿಕಾದ ಮಸಾಯ್ ಮಾರಾ ನ್ಯಾಶನಲ್‌ ಪಾರ್ಕ್‌ನಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಂಗೊಳಿಸಿದ್ದಾರೆ ಇಶಿತಾ.

ಇನ್ನೂ ವಿಶೇಷ ಏನೆಂದರೆ, ಆಫ್ರಿಕಾದ ಸಾಂಪ್ರದಾಯಿಕ ಉಡುಗೆ ಧರಿಸಿದ ಅಲ್ಲಿನ ಬುಡಕಟ್ಟು ಜನರ ಜತೆಗೆ ಇಶಿತಾ ಕರ್ನಾಟಕ ಸಂಸ್ಕೃತಿ ಪ್ರತೀಕವಾದ ಲಂಗ ದಾವಣಿಯಲ್ಲಿ ಮಿನುಗಿದ್ದಾರೆ.

ಅಂದಹಾಗೆ ಆಫ್ರಿಕಾದಲ್ಲಿ ಹತ್ತಾರು ಬಗೆಯ ಸಂಪ್ರದಾಯಗಳಿವೆ. ಒಂದೊಂದು ಸಮುದಾಯಕ್ಕೂ ಒಂದೊಂದು ರೀತಿಯ ದಿರಿಸುಗಳಿವೆ.

ಆ ಪೈಕಿ ಮಸಾಯ್‌ ಭಾಗದ ಜನ ಈ ರೀತಿಯ ಕಾಸ್ಟ್ಯೂಮ್‌ನಲ್ಲಿ ಕಾಣಿಸುತ್ತಾರೆ. ಇದೀಗ ಇದೇ ಜನರ ಜತೆಗೆ ಚೆಂದದ ಫೋಟೋ ಕ್ಲಿ...