Bengaluru, ಫೆಬ್ರವರಿ 11 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಫೆಬ್ರುವರಿ 10ರ ಸಂಚಿಕೆಯಲ್ಲಿ ಕುಸುಮಾ ಸೇಡು ತೀರಿಸಿಕೊಳ್ಳಲು ಹೋದ ಪ್ರಸಂಗ ನಡೆಯಿತು. ಮನೆಯಲ್ಲಿ ಪೂಜಾ ಮೂಲಕ ಹಿತಾಗೆ ಫೋನ್ ಮಾಡಿಸಿದ ಕುಸುಮಾ, ಭಾಗ್ಯಾಳ ಕೆಲಸ ಕಸಿದುಕೊಂಡಿದ್ದು ಯಾರು ಎಂದು ವಿಚಾರಿಸುತ್ತಾಳೆ. ಆಗ ಇದೆಲ್ಲವೂ ಕನ್ನಿಕಾ ಮಾಡಿರುವ ಕುತಂತ್ರ ಎಂದು ಅರಿವಾಗುತ್ತದೆ. ಅಲ್ಲದೆ, ಕನ್ನಿಕಾಳ ಆಫೀಸ್‌ನ ವಿಳಾಸ ಪಡೆದುಕೊಂಡು ಅಲ್ಲಿಗೆ ಹೊರಡಲು ಕುಸುಮಾ ಸಜ್ಜಾಗುತ್ತಾಳೆ. ಈ ವಿಚಾರ ಭಾಗ್ಯಾಳ ಅರಿವಿಗೆ ಬರುವುದಿಲ್ಲ. ಅವಳಿಗೆ ತಿಳಿಸುವುದು ಬೇಡ ಎನ್ನುವುದು ಕುಸುಮಾಳ ಯೋಚನೆಯಾಗಿರುತ್ತದೆ.

ಭಾಗ್ಯಾಗೆ ಹೊಸ ಕೆಲಸ ಹುಡುಕುವುದೇ ಸವಾಲಾಗಿದೆ. ಎಲ್ಲರ ಬಳಿಯೂ ಕೆಲಸ ಕೇಳುವುದನ್ನು ಮುಂದುವರಿಸಿದ್ದಾಳೆ. ತಾನು ಕೆಲಸ ಮಾಡುತ್ತಿದ್ದ ಹೋಟೆಲ್‌ಗೂ ಮತ್ತೊಮ್ಮೆ ಕರೆ ಮಾಡಿ, ಯಾರಾದರೂ ಕೆಲಸ ಕೊಡಿಸುವುದಿದ್ದರೆ ಅವರ ನಂಬರ್ ಕೊಡಿ ಎಂದು ಕೇಳುತ್ತಾಳೆ. ಆದರೆ ಈಗಿರುವ ಪರಿಸ್ಥಿತಿಯಲ್ಲಿ ನಿಮಗೆ ಕೆಲಸ ಸಿಗುವುದು ಕಷ್ಟ ಎಂದು ಹೇಳುತ್ತಾರೆ....