Bengaluru, ಫೆಬ್ರವರಿ 12 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಫೆಬ್ರುವರಿ 11ರ ಸಂಚಿಕೆಯಲ್ಲಿ ಕುಸುಮಾ ಮತ್ತು ಧರ್ಮರಾಜ್‌ಗೆ ಕನ್ನಿಕಾ ಇನ್ನಿಲ್ಲದ ರೀತಿಯಲ್ಲಿ ಅವಮಾನ ಮಾಡುತ್ತಿದ್ದಾಳೆ. ಇಬ್ಬರೂ ನ್ಯಾಯ ಕೇಳಿಕೊಂಡು ಕನ್ನಿಕಾ ಆಫೀಸ್‌ಗೆ ಹೋಗಿರುತ್ತಾರೆ. ಆಗ ಕನ್ನಿಕಾ ಆಫೀಸ್‌ನ ಉದ್ಯೋಗಿಗಳು ಕೂಡ ಅವಳಿಗೆ ಸಾಥ್ ನೀಡುತ್ತಾ, ಭಾಗ್ಯ ಮಾಡಿದ್ದು ತಪ್ಪು ಎಂದು ವಾದಿಸುತ್ತಾರೆ. ಕುಸುಮಾ ಮತ್ತು ಧರ್ಮರಾಜ್ ಮಾತಿಗೆ ಕನ್ನಿಕಾ ಒಂದಿಷ್ಟೂ ಬೆಲೆ ಕೊಡುವುದಿಲ್ಲ. ಅಲ್ಲದೆ, ಅವರಿಗೆ ಮತ್ತಷ್ಟು ನಿಂದನೆಯ ಮಾತುಗಳನ್ನು ಆಡುತ್ತಾ, ಬೇಸರ ಮೂಡಿಸುತ್ತಾಳೆ. ಅವರ ಬೆಂಬಲಕ್ಕೆ ಅಲ್ಲಿ ಯಾರೂ ಇರುವುದಿಲ್ಲ. ಕನ್ನಿಕಾಳ ಕಿರುಚಾಟದ ಎದುರು, ಕುಸುಮಾ ಮಾತು ಯಾರಿಗೂ ಕೇಳಿಸುವುದಿಲ್ಲ, ತನ್ನ ಸೊಸೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಪಟ್ಟರೂ, ಕನ್ನಿಕಾ ಎದುರು ಅದು ಸಾಧ್ಯವಾಗುವುದಿಲ್ಲ.

ಆಫೀಸ್‌ನಲ್ಲಿ ತಾಂಡವ್ ತುಂಬಾ ಟೆನ್ಶನ್‌ನಲ್ಲಿ ಕುಳಿತಿರುತ್ತಾನೆ. ಯಾವುದೋ ಕೆಲಸ ಬಾಕಿ ಇದೆ ಎಂದು ಕೊರಗುತ್ತಿರುವಾಗ, ಶ್ರೇಷ್ಠ...