Udupi, ಮೇ 8 -- ಉಡುಪಿ: ಒಂದು ಕೈಯಲ್ಲಿ ಚಕ್ರ, ಇನ್ನೊಂದು ಕೈಯಲ್ಲಿ ಸಿಂಧೂರ ಬಟ್ಟಲು. ಇವನ್ನು ಹಿಡಿದುಕೊಂಡ ಉಡುಪಿಯ ಶ್ರೀಕೃಷ್ಣ. ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಕಿರಿಯ ಶ್ರೀಗಳು ಆಪರೇಷನ್ ಸಿಂದೂರ ಕಾರ್ಯಾಚರಣೆಯ ದ್ಯೋತಕವಾಗಿ ಶ್ರೀಕೃಷ್ಣನ ಅಲಂಕಾರವನ್ನು ಹೀಗೆ ಮಾಡಿದ್ದರು.ಪರ್ಯಾಯ ಕಿರಿಯ ಶ್ರೀಪಾದರಿಂದ ಪ್ರತಿದಿನ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಭಾರತದ ಮೇಲೆ ಪಾಕಿಸ್ತಾನ ಪ್ರೇಷಿತ ಉಗ್ರಗಾಮಿಗಳು ಪಹಲ್ಗಾಮ್‌ನಲ್ಲಿ 26 ಮಂದಿ ಹಿಂದುಗಳನ್ನು ನಿರ್ದಯವಾಗಿ ಹತ್ಯೆ ಮಾಡಿದ್ದಕ್ಕಾಗಿ ಭಾರತ ಪ್ರಬಲ ಪ್ರತಿರೋಧವನ್ನು ತೋರಿತ್ತು. ಆಪರೇಷನ್ ಸಿಂದೂರ ಹೆಸರಲ್ಲಿ 26 ಮಂದಿ ಮಹಿಳೆಯರ ಸಿಂದೂರ ಕಸಿದ ಭಯೋತ್ಪಾದಕರನ್ನು ತಯಾರು ಮಾಡುವ ಉಗ್ರಗಾಮಿ ನೆಲೆಗಳಿಗೆ ನುಗ್ಗಿ ಅದನ್ನು ಧ್ವಂಸ ಮಾಡಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯ ದ್ಯೋತಕವಾಗಿ ಪ್ರತಿ ದೇವಸ್ಥಾನಗಳಲ್ಲೂ ವಿಶೇಷ ಪ್ರಾರ್ಥನೆ, ಸೈನಿಕರಿಗೆ ಶಕ್ತಿ ತುಂಬಲು ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಇದೇ ವೇಳೆ ಶ್ರೀಕೃಷ್ಣನನ್ನು ಚಕ್ರಪಾಣಿಯನ್ನಾಗಿಸಿ ಅಲಂಕಾರವನ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.