ಭಾರತ, ಮೇ 25 -- ಆಪರೇಷನ್ ಸಿಂದೂರ್ ಬಗ್ಗೆ ಮಾಹಿತಿ ನೀಡುವುದಕ್ಕೆ, ಭಯೋತ್ಪಾದನೆ ವಿರುದ್ಧದ ಸಮರ ಭಾರತದ್ದಷ್ಟೇ ಅಲ್ಲ, ಜಗತ್ತಿನ ಸಮರವೂ ಹೌದು ಎಂಬುದನ್ನು ಮನವರಿಕೆ ಮಾಡಿಕೊಡಲು ಭಾರತ ಸರ್ಕಾರ ಸಂಸದರ ನಿಯೋಗವನ್ನು ವಿವಿಧ ದೇಶಗಳಿಗೆ ಕಳುಹಿಸಿದೆ. ಈ ಪೈಕಿ ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗವು ಅಮೆರಿಕ ಕಾಲಮಾನ ಶನಿವಾರ (ಇಂದು) ನ್ಯೂಯಾರ್ಕ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದೆ. ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಚಾಲ್ತಿಗೆ ಬಂದ ಹೊಸ ನಿಯಮದ ಬಗ್ಗೆ ಮಾತನಾಡಿದ ಶಶಿ ತರೂರ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಗಡಿಯಾಚೆಯಿಂದ ಬಂದು ನಿರ್ಭೀತಿಯಿಂದ ಭಾರತದ ನಾಗರಿಕರನ್ನು ಹತ್ಯೆ ಮಾಡುತ್ತಾರೆ ಎಂದಾದರೆ, "ಅದಕ್ಕೆ ತಕ್ಕ ಬೆಲೆ"ಯನ್ನೂ ಅವರು ಪಾವತಿಸಬೇಕಾಗುತ್ತದೆ ಎಂದು ಸಂಸದೀಯ ನಿಯೋಗದ ನಾಯಕ ಶಶಿ ತರೂರ್ ಪ್ರತಿಪಾದಿಸಿದರು.
ಅಮೆರಿಕಕ್ಕೆ ತೆರಳಿದ ಸಂಸದೀಯ ನಿಯೋಗದ ನಾಯಕ ಶಶಿ ತರೂರ್ ಅವರು ಏಪ್ರಿಲ್ 22ರ ಪಹಲ್ಗಾಮ್ ಉಗ್ರ ದಾಳಿಯ ವಿವರ ನೀಡುತ್ತ, ದಾಳಿ ನಡೆಸಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.