ಭಾರತ, ಮೇ 12 -- ಎಕ್ಸ್ ಖಾತೆಯಲ್ಲಿ ಕೆಟ್ಟ ಸಂದೇಶಗಳನ್ನು ಎದುರಿಸಿದ ಐಎಫ್‌ಎಸ್ ಅಧಿಕಾರಿ ವಿಕ್ರಮ್ ಮಿಸ್ರಿ ಭಾನುವಾರ (ಮೇ 11) ತಮ್ಮ ಎಕ್ಸ್ ಖಾತೆಯನ್ನು ಲಾಕ್ ಮಾಡಿಕೊಂಡಿದ್ದಾರೆ. ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟ ತೀವ್ರಗೊಂಡ ಬೆನ್ನಿಗೆ ಆಪರೇಷನ್ ಸಿಂದೂರದ ಮಾಹಿತಿಯನ್ನು ಮಾಧ್ಯಮ ಪ್ರತಿನಿಧಿಗಳಿಗೆ ಒದಗಿಸುವುದಕ್ಕಾಗಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಐಎಫ್‌ಎಸ್ ಅಧಿಕಾರಿ ವಿಕ್ರಮ್ ಮಿಸ್ರಿ ಸದ್ಯ ಕುತೂಹಲದ ಕೇಂದ್ರ ಬಿಂದು.

ವಿಕ್ರಮ್ ಮಿಸ್ರಿ ಅವರು 1989ರ ಇಂಡಿಯನ್ ಫಾರಿನ್ ಸರ್ವೀಸ್ (ಐಎಫ್‌ಎಸ್) ಅಧಿಕಾರಿ. ವಿದೇಶಾಂಗ ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ಪ್ರತಿಭಾವಂತ ಅಧಿಕಾರಿಯಾಗಿದ್ದು, ಭಾರತ- ಪಾಕ್ ಬಿಕ್ಕಟ್ಟಿನ ಮಾಹಿತಿ ಒದಗಿಸುತ್ತಿರುವ ಭಾರತ ಸರ್ಕಾರದ ಪ್ರತಿನಿಧಿಯಾಗಿ ಗಮನಸೆಳೆದಿದ್ದಾರೆ.

ವಿಕ್ರಮ್ ಮಿಸ್ರಿ ಅವರು ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ಜನಿಸಿದ್ದು, ಉಧಂಪುರದ ಬರ್ನ್ ಹಾಲ್ ಸ್ಕೂಲ್ ಮತ್ತು ಡಿಎವಿ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಬಳಿಕ ಜಮ್ಮು- ಕಾಶ್ಮೀರದ ಕಾರ್ಮೆಲ್ ಕಾನ್ವೆಂ...