ಭಾರತ, ಮೇ 11 -- ಬ್ರಹ್ಮೋಸ್ ಕ್ಷಿಪಣಿ: ಉತ್ತರ ಪ್ರದೇಶದ ಲಕ್ನೋ (ಲಖನೌ)ನಲ್ಲಿ ಹೊಸ ಬ್ರಹ್ಮೋಸ್‌ ಕ್ಷಿಪಣಿ ಹಬ್ ಉದ್ಘಾಟನೆ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾತನಾಡುತ್ತ, ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಏನು ಎಂಬುದು ತಿಳಿಯಬೇಕಾದರೆ ಪಾಕಿಸ್ತಾನದ ಬಳಿ ಕೇಳಬೇಕು ಎಂದು ಹೇಳಿದ್ದರು. ಬ್ರಹ್ಮೋಸ್ ಕ್ಷಿಪಣಿಯ 10 ಆಸಕ್ತಿದಾಯಕ ಅಂಶಗಳ ವಿವರ ಇಲ್ಲಿದೆ.

1) ಬ್ರಹ್ಮೋಸ್ ಕ್ಷಿಪಣಿಯ ವೇಗವು ಶಬ್ದಕ್ಕಿಂತ ಮೂರು ಪಟ್ಟು ವೇಗವಾಗಿದೆ. ಸಾಂಪ್ರದಾಯಿಕ ಸಬ್‌ಸೋನಿಕ್ ಕ್ರೂಸ್ ಮಿಸೈಲ್‌ಗಳಿಗಿಂತ ಮೂರು ಪಟ್ಟು ವೇಗದಲ್ಲಿ ಇದು ಸಂಚರಿಸಿ ನಿರ್ದಿಷ್ಟ ಗುರಿಯನ್ನು ನಾಶ ಪಡಿಸುವ ಸಾಮರ್ಥ್ಯ ಹೊಂದಿದೆ. ಲಕ್ನೋದಲ್ಲಿ ಸ್ಥಾಪಿತವಾಗಿರುವ ಬ್ರಹ್ಮೋಸ್ ಕ್ಷಿಪಣಿ ಹಬ್‌ನಲ್ಲಿ ವರ್ಷಕ್ಕೆ 80 ರಿಂದ 100 ಕ್ಷಿಪಣಿ ಉತ್ಪಾದನೆ ಸಾಮರ್ಥ್ಯವಿದೆ. (ಸಾಂಕೇತಿಕ ಚಿತ್ರ)

2) ಲಕ್ನೋದ ಬ್ರಹ್ಮೋಸ್ ಕ್ಷಿಪಣಿ ಹಬ್ ಅನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಉದ್ಘಾಟಿಸಿದರು. ಭಾರತ- ರಷ್ಯಾ ಜಂಟಿ ಉದ್ಯಮ ಬ್ರಹ್ಮೋಸ್ ಏರೋಸ್ಪೇಸ್ ಈ ಕ್ಷಿಪಣಿಯನ್ನು ಉತ್ಪಾದಿಸುತ್ತಿ...