ಭಾರತ, ಮೇ 12 -- ನವದೆಹಲಿ: ಆಪರೇಷನ್ ಸಿಂದೂರ ಕಾರ್ಯಾಚರಣೆ ಶುರುವಾದ ನಂತರದಲ್ಲಿ ಮೇ 9 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಫೋನ್ ಕರೆ ಮಾಡಿ ಮಾತನಾಡಿದ್ದಾರೆ. ಅವರ ಮಾತುಕತೆ ವಿವರ ಏನು ಎಂಬ ಕುತೂಹಲ ಸಹಜ. ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಮೇ 9 ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರವಾಣಿ ಕರೆ ಮಾಡಿದಾಗ, ಪಾಕಿಸ್ತಾನದಿಂದ ದಾಳಿ ಪ್ರಮಾಣ ಹೆಚ್ಚಳದ ಬಗ್ಗೆ ಮತ್ತು ಪರಿಸ್ಥಿತಿ ಅವಲೋಕನ ನಡೆಸುವ ವಿಚಾರ ಮಾತನಾಡಿದ್ದರು. ಇಸ್ಲಾಮಾಬಾದ್ ನಡೆಸಿದ ಅಪಾಯಕಾರಿ ಡ್ರೋನ್ ದಾಳಿ ವಿಚಾರವನ್ನೂ ಪ್ರಸ್ತಾಪಿಸಿದ್ದರು ಎಂದು ಈ ವಿದ್ಯಮಾನದ ಬಗ್ಗೆ ತಿಳಿದ ಜನರು ಹೇಳಿದ್ದಾಗಿ ಮೂಲಗಳು ಭಾನುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪಾಕಿಸ್ತಾನದ ಪ್ರತಿ ದಾಳಿಯನ್ನೂ ಭಾರತ ಪ್ರಬಲವಾಗಿ ಎದುರಿಸುತ್ತಿದ್ದು, ತಕ್ಕ ಉತ್ತರ ನೀಡಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮೇ 7 ರಂದು ಅಮೆರಿಕದ ವಿದೇಶಾಂಗ ಸಚಿವರ ಜತೆಗೆ ಮಾತನಾಡುತ್ತ ತಿಳಿಸಿದ್ದು ವರದಿಯಾಗಿತ್ತು. ಈ ಮಾತ...
Click here to read full article from source
To read the full article or to get the complete feed from this publication, please
Contact Us.