ಭಾರತ, ಮೇ 11 -- ಆಪರೇಷನ್ ಸಿಂದೂರ: ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯನ್ನು ಭಾರತ ಮುಂದುವರಿಸಿದೆ. ಆಪರೇಷನ್ ಸಿಂದೂರ ಕಾರ್ಯಾಚರಣೆ ಮುಂದುವರಿಸಲಾಗಿದ್ದು, ಇದುವರೆ ಅದರ ಪರಿಣಾಮ ಮತ್ತು ಫಲಿತಾಂಶ ಗಮನಿಸಿದರೆ, ಒಂದಷ್ಟು ಉದ್ದೇಶಗಳು ಈಡೇರಿವೆ ಎಂದು ಬಾರತೀಯ ಸೇನಾಧಿಕಾರಿಗಳು ಭಾನುವಾರ (ಮೇ 11) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಏರ್ ಮಾರ್ಷಲ್‌ ಎಕೆ ಭಾರ್ತಿ, ಲೆಫ್ಟಿನೆಂಟ್ ಕರ್ನಲ್ ರಾಜೀವ್ ಘಾಯ್‌, ಮೇಜರ್ ಜನರಲ್‌ ಎಸ್‌ ಎಸ್‌ ಶರ್ಮಾ, ವೈಸ್ ಅಡ್ಮಿರಲ್ ಎಎನ್ ಪ್ರಮೋದ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಭಾರತ ರಫೇಲ್ ಯುದ್ಧ ವಿಮಾನವನ್ನು ಕಳೆದುಕೊಂಡಿದೆಯೇ, ಪಾಕಿಸ್ತಾನದ ಹೇಳಿಕೆ ಕುರಿತಾಗಿ ಭಾರತದ ಸುದ್ದಿಗಾರರು ಪ್ರಶ್ನಿಸಿದಾಗ, ಯಾವುದೇ ಯುದ್ಧ ಸನ್ನಿವೇಶದಲ್ಲಿ ನಾಶ ನಷ್ಟು ಸಾಮಾನ್ಯ ಎಂದಷ್ಟೇ ಏರ್ ಮಾರ್ಷಲ್ ಎಕೆ ಭಾರ್ತಿ ಪ್ರತಿಕ್ರಿಯಿಸಿದರು. ಪಾಕಿಸ್ತಾನದ ಹೇಳಿಕೆಯನ್ನು ನಿರಾಕರಿಸುವುದಾಗಲೀ, ಅದನ್ನು ಪುರಸ್ಕರಿಸುವುದನ್ನಾಗಿ ಏರ್ ಮಾರ್ಷಲ್ ಎಕೆ ಭಾರ್ತಿ ಮಾಡಲಿಲ್ಲ.

"ನಾವು ಯುದ್ಧ ಸನ್ನಿವೇಶದಲ್ಲಿದ್ದೇವೆ. ...