Bangalore, ಮೇ 16 -- ʼಆಪರೇಷನ್‌ ಸಿಂದೂರʼದ ಮೂಲಕ ಭಾರತವು ಪಾಕಿಸ್ತಾನದ ವಿರುದ್ಧ ಮೇಲುಗೈ ಸಾಧಿಸಿದೆ ಎನ್ನುವುದನ್ನು ಬಹುತೇಕರು ಒಪ್ಪುತ್ತಿದ್ದಾರೆ. ಅದೆಷ್ಟೋ ಚರ್ಚೆಗಳಲ್ಲಿ ಜಾಗತಿಕ ರಕ್ಷಣಾ ತಜ್ಞರು ಕೂಡ ಇದನ್ನೇ ಹೇಳುತ್ತಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಮಾತ್ರ ʼಸೋತರು ಮೀಸೆ ಮಣ್ಣಾಗಿಲ್ಲʼ ಎನ್ನುವ ಧೋರಣೆಯ ಬರಹಗಳು ಬರುತ್ತಿವೆ. ಭಾರತದ ಧನಾತ್ಮಕ ವಿಚಾರವನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿಗಳು ಕಾಣಿಸುತ್ತಿವೆ. ಅಂತಾರಾಷ್ಟ್ರೀಯ ಮುಖವಾಣಿ ಎಂದು ಪರಿಗಣಿಸಲಾಗುವ ಮಾಧ್ಯಮ ಅಥವಾ ಏಜೆನ್ಸಿಗಳು ಪಾಕಿಸ್ತಾನದ ಸುಳ್ಳನ್ನು ʼಸೋರ್ಸ್‌ʼ ಎಂದು ಪರಿಗಣಿಸಿ ಪ್ರಕಟಿಸಿದಂತೆ, ಭಾರತದ ಸಾಕ್ಷ್ಯಗಳನ್ನು ಬರೆಯಲು ಹಿಂಜರಿಯುತ್ತಿವೆ. ಬರೆದರೂ ಅದರಲ್ಲಿ ʼif, butʼ ಎನ್ನುವುದು ಹೆಚ್ಚಿದೆ. ಇದಕ್ಕೆ ಪ್ರಮುಖ ಕಾರಣ ಸೈದ್ಧಾಂತಿಕ ಭಿನ್ನತೆ ಹಾಗೂ ಚೀನಾ-ಅಮೆರಿಕದ ಪ್ರಭಾವ ಎನ್ನುವುದು ಎಲ್ಲರಿಗೂ ತಿಳಿದಿದೆ.

ಆದರೆ ಇದಕ್ಕೆ ಪರ್ಯಾಯ ನಿರೂಪಣೆಯನ್ನು ಹೊಂದುವ ಪ್ರಯತ್ನವನ್ನೇ ಭಾರತ ಗಟ್ಟಿಯಾಗಿ ಮಾಡುತ್ತಿಲ್ಲ. ಹೀಗಿರುವಾಗ ಭ...