Mysuru, ಮೇ 16 -- ಮೈಸೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಸುತ್ತೂರು ಮಠಾಧಿಪತಿ‌ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಪೀಠಾಧಿಪತಿ ಶ್ರೀ ಸೋಮನಾಥ ಸ್ವಾಮೀಜಿ, ಕ್ರೈಸ್ತ ಧರ್ಮಗುರುಗಳು, ಮುಸ್ಲಿ‌ಂ ಧರ್ಮಗುರುಗಳು ಭಾಗಿಯಾದರು,

ತಿರಂಗಾ ಯಾತ್ರೆಯಲ್ಲಿ ಭಾಗಿಯಾದ ಧರ್ಮಗುರುಗಳು ಭಾರತದ ಸೇನೆಯ ಮಹತ್ವ, ಭಾರತದ ಹೋರಾಟದ ಕೆಚ್ಚು, ಭಾರತದ ಸೈನಿಕರ ಪರಾಕ್ರಮದ ಕುರಿತು ಮಾತನಾಡಿದರು,.

ಭಾರತದ ಭದ್ರತೆ ಹಾಗೂ ಸಾರ್ವಭೌಮತೆಯನ್ನು ಕಾಪಾಡುತ್ತಿರುವ ಸೇನಾಧಿಕಾರಿಗಳು ಹಾಗೂ ಸೈನಿಕರಿಗೆ ಬೆಂಬಲವಾಗಿ ನಾವು ಸದಾ ನಿಂತು ನೈತಿಕ ಸ್ಥೈರ್ಯ ತುಂಬಬೇಕು ಎಂದು ಧರ್ಮಗುರುಗಳು ಮನವಿ ಮಾಡಿದರು.

ಮೈಸೂರಿನ ಫೀಲ್ಡ್ ಮಾರ್ಷಲ್‌ ಕೆ ಎಂ ಕಾರ್ಯಪ್ಪ ವೃತ್ತದಲ್ಲಿ ತಿರಂಗಾ ಯಾತ್ರೆಗೆ ಚಾಲನೆ ನೀಡಿದಾದ ನೂರಾರು ಮಂದಿ ಬಾವುಟ ಹಿಡಿದು ಹೆಜ್ಜೆ ಹಾಕಿದರು.

ಶ್ರೀರಾಮಪೇಟೆಯ ವ...