Bangalore, ಮೇ 26 -- ಅಮೃತಧಾರೆ ಧಾರಾವಾಹಿಯ ಕಳೆದ ಕೆಲವು ಸಂಚಿಕೆಗಳನ್ನು ನೋಡಿ ಸೀರಿಯಲ್‌ ವೀಕ್ಷಕರು ಖುಷಿಯಾಗಿದ್ದರು. ಕೊನೆಗೂ ಶಕುಂತಲಾದೇವಿಯ ರಹಸ್ಯ ಎಲ್ಲರಿಗೂ ತಿಳಿಯುವ ಸಮಯ ಬಂದಿದೆ ಎಂದು ಭಾವಿಸಿದ್ದರು. ಆದರೆ, ಸೀರಿಯಲ್‌ ನಿರ್ದೇಶಕರು ಅಮೃತಧಾರೆ ಧಾರಾವಾಹಿಯನ್ನು ಬೇಗ ಮುಗಿಸುವ ಆತುರದಲ್ಲಿ ಇಲ್ಲ ಎನ್ನುವುದು ತಿಳಿದು ಬೇಸರಗೊಂಡಿದ್ದಾರೆ.

ಕನಕದುರ್ಗಾದಲ್ಲಿ ಭೂಮಿಕಾ ಮತ್ತು ಆನಂದ್‌ ಸೇರಿ ಪಂಕಜಾಳ ರಹಸ್ಯ ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಬಾರ್‌ನೊಳಗೆ ನಂಜಮ್ಮಳ ಗಂಡ ಇರುವ ವಿಷಯ ತಿಳಿದು ಆನಂದ್‌ ಅಲ್ಲಿಗೆ ಹೋಗಿ ಸಾಕಷ್ಟು ಸಂಗತಿ ತಿಳಿದುಕೊಳ್ಳುತ್ತಾನೆ.

ವಿಶೇಷವೆಂದರೆ ನಂಜಮ್ಮನ ಗಂಡ ಕಾಂತನ ಕಥೆಯನ್ನು ಹೇಳುತ್ತಾನೆ. ಪಂಕಜಾಳ ಕಥೆಯನ್ನು ಇನ್ನು ಬಾಯ್ಬಿಟ್ಟಿಲ್ಲ. ಹೀಗಾಗಿ, ಶಕುಂತಲಾ ಗ್ಯಾಂಗ್‌ ಸದ್ಯ ಸಿಕ್ಕಿ ಬೀಳುವ ಸಾಧ್ಯತೆ ಇಲ್ಲ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

ತನ್ನ ಗಂಡನನ್ನು ಹುಡುಕುತ್ತಾ ಬಂದ ನಂಜಮ್ಮಳಿಗೆ ಅಲ್ಲಿ ಆನಂದ್‌ ಕಾಣಿಸುತ್ತಾನೆ. ಅವತ್ತು ಕನಕಪುರದಲ್ಲಿಯೂ ಇವನೇ ಅಲ್ವಾ ...