ಭಾರತ, ಮೇ 27 -- ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀಕನ್ನಡ ಬಿಡುಗಡೆ ಮಾಡಿದೆ. ಇದರಲ್ಲಿ ಆನಂದ್‌ ವಿಚಾರವಾಗಿ ಗೌತಮ್‌ ದಿವಾನ್‌ ಅವರು ಅಪರ್ಣ ಮತ್ತು ಭೂಮಿಕಾರ ಬಳಿ ವಿಚಾರಿಸುವ ವಿವರ ಇದೆ.

ಇದರೊಂದಿಗೆ ಭೂಪತಿಯಲ್ಲಿಗೆ ಬಂದ ಜೀವನಿಗೆ ಭೂಪತಿಯ ನಿಜವಾದ ಉದ್ದೇಶ ಏನೆಂದೂ ತಿಳಿಯುವ ಸೂಚನೆ ಇದೆ. ನಿನ್ನೆಯ ಎಪಿಸೋಡ್‌ಗೆ ಆನಂದ್‌ಗೆ ಶಕುಂತಲಾ ಗ್ಯಾಂಗ್‌ನ ಗೂಂಡಾಗಳು ಸಿಕ್ಕಾಪಟ್ಟೆ ಹೊಡೆದಿದ್ದರು.

ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾದೇವಿಯ ಹಳೆ ಕಥೆ ಆನಂದ್‌ಗೆ ತಿಳಿದುಬಿಟ್ಟಿದೆ. ಅವಳು ಶಕುಂತಲಾದೇವಿ ಅಲ್ಲ, ಅವಳ ಹೆಸರು ಪಂಕಜಾ, ಅವನು ಲಕ್ಷ್ಮಿಕಾಂತ ಅಲ್ಲ, ಅವನು ಕೇವಲ ಕಾಂತಾ ಎಂಬ ಸತ್ಯವನ್ನು ನಂಜಮ್ಮನ ಗಂಡ ಬಾಯ್ಬಿಟ್ಟಿದ್ದಾನೆ.

ಹಳ್ಳಿಯಲ್ಲಿದ್ದಾಗ ಅವರಿಬ್ಬರು ಮಾಡದ ಕೆಲಸವಿಲ್ಲ ಎಂದು ಆತ ಹೇಳಿದ್ದಾನೆ. ಗೌತಮ್‌ನ ಮಲತಾಯಿಯಾಗಿ ಇಷ್ಟು ವರ್ಷ ಶಕುಂತಲಾದೇವಿ ಮಾಡಿರುವ ಮೋಸವನ್ನು ಆನಂದ್‌ ತಿಳಿದುಕೊಂಡಿದ್ದಾನೆ.

ಆನಂದ್‌ಗೆ ವಿಚಾರ ಗೊತ್ತಾಗಿದೆ ಎಂದು ತಿಳಿದ ನಂಜಮ್ಮ ಮತ್ತು ಶಕುಂತಲಾದೇವಿಯು ಆನಂದ್‌...