Bengaluru, ಮೇ 19 -- ಅರ್ಥ: ಆತನು ಎಲ್ಲ ಪ್ರಕಾಶಮಾನ ವಸ್ತುಗಳ ಬೆಳಕಿನ ಮೂಲ. ಆತನು ಜಡವಸ್ತುವಿನ ತಮಸ್ಸಿನಾಚೆ ಇದ್ದಾನೆ ಮತ್ತು ಅವನು ಅವ್ಯಕ್ತನು. ಅವನು ಜ್ಞಾನ, ಜ್ಞಾನದ ವಸ್ತು ಮತ್ತು ಜ್ಞಾನದ ಗುರಿ. ಅವನು ಎಲ್ಲರ ಹೃದಯಗಳಲ್ಲಿ ಪ್ರತಿಷ್ಠಿತನಾಗಿದ್ದಾನೆ.

ಭಾವಾರ್ಥ: ದೇವೋತ್ತಮ ಪರಮ ಪುರುಷನಾದ ಪರಮಾತ್ಮನು ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಂತಹ ಪ್ರಕಾಶಮಾನ ವಸ್ತುಗಳ ಪ್ರಭೆಯ ಮೂಲ. ಆಧ್ಯಾತ್ಮಿಕ ಜಗತ್ತಿನಲ್ಲಿ ಸೂರ್ಯ ಚಂದ್ರರ ಅಗತ್ಯವೇ ಇಲ್ಲ. ಏಕೆಂದರೆ ಪರಮ ಪ್ರಭುವಿನ ಪ್ರಭೆಯೇ ಅಲ್ಲಿದೆ ಎನ್ನುವುದನ್ನು ವೇದ ಸಾಹಿತ್ಯದಲ್ಲಿ ಕಾಣುತ್ತೇವೆ. ಐಹಿಕ ಜಗತ್ತಿನಲ್ಲಿ ಪ್ರಭುವಿನ ದಿವ್ಯತೇಜಸ್ಸಾದ ಬ್ರಹ್ಮ ಜ್ಯೋತಿಯನ್ನು ಮಹತ್‌ತ್ವವು ಎಂದರೆ ಐಹಿಕ ಘಟಕಾಂಶಗಳು ಮರೆಮಾಡಿರುತ್ತವೆ; ಆದುದರಿಂದ ಈ ಐಹಿಕ ಜಗತ್ತಿನಲ್ಲಿ ಬೆಳಕಿಗಾಗಿ ನಮಗೆ ಸೂರ್ಯ, ಚಂದ್ರ, ವಿದ್ಯುಚ್ಛಕ್ತಿ ಮೊದಲಾದವುಗಳ ನೆರವು ಬೇಕು. ಆದರೆ ಆಧ್ಯಾತ್ಮಿಕ ಜಗತ್ತಿನಲ್ಲಿ ಅಂತಹ ವಸ್ತುಗಳ ಅಗತ್ಯವಿಲ್ಲ. ಪರಮಾತ್ಮನ ಪ್ರಕಾಶಮಾನ ತೇಜಸ್ಸಿನಿಂದ ಎಲ್ಲದರ ಮೇಲೂ ಬೆಳಕು ...