ಭಾರತ, ಮಾರ್ಚ್ 8 -- ಮಂಡ್ಯ: ನಾಗಮಂಗಲ ತಾಲೂಕಿನ ಐತಿಹಾಸಿಕ ಆದಿಚುಂಚನಗಿರಿ ಜಾತ್ರೆ ಅದ್ದೂರಿಯಾಗಿ ಆರಂಭಗೊಂದಿದೆ. ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಧರ್ಮಧ್ವಜಾರೋಹಣ ಮತ್ತು ನಾಂದಿ ಪೂಜೆಗಳನ್ನು ನೆರವೇರಿಸುವ ಮೂಲಕ ಶುಕ್ರವಾರ (ಮಾರ್ಚ್‌ 7) ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಆದಿ ಚುಂಚನಗಿರಿ ಮಠದಲ್ಲಿ 9 ದಿನಗಳ ಕಾಲ ಸಂಭ್ರಮದ ಜಾತ್ರೆ ನಡೆಯಲಿದ್ದು, ಮೊದಲನೇ ದಿನ ಗಂಗಾಧರೇಶ್ವರ ಸ್ವಾಮಿ, ಶ್ರೀಕಾಲಭೈರವೇಶ್ವರ ಸ್ವಾಮಿ ಮತ್ತು ಬಾಲಗಂಗಾಧರನಾಥ ಸ್ವಾಮೀಜಿ ಗದ್ದುಗೆ ಸೇರಿದಂತೆ ಕ್ಷೇತ್ರದ ಎಲ್ಲಾ ದೇವಾಲಯಗಳಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.

ಮಾರ್ಚ್‌ 7ರಂದು ಆರಂಭವಾದ ಜಾತ್ರೆ 15ರವರೆಗೂ ನಡೆಯಲಿದೆ. 9 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಪೂಜಾ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಜಾತ್ರೆ ಅಂಗವಾಗಿ ಕ್ಷೇತ್ರದ ದೇವಾಲಯಗಳನ್ನು ಸಿಂಗರಿಸಲಾಗಿದೆ. ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಎಲ್ಲೆಡೆ ಹಬ್ಬದ ವಾತಾವರಣವಿದೆ. ಜಾತ್ರೆಗೆ ಬರುವ ಭಕ್ತರಿಗಾಗಿ ...