ಭಾರತ, ಜುಲೈ 23 -- ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್‌) ಸಲ್ಲಿಕೆ ದಿನಾಂಕ ವಿಸ್ತರಣೆಯಾಗಿದೆ. ಹಣಕಾಸು ವರ್ಷ 2024-25 (ಮೌಲ್ಯಮಾಪನ ವರ್ಷ 2025-26)ರ ಐಟಿ ರಿಟರ್ನ್ಸ್ ಸಲ್ಲಿಕೆಯ ಗಡುವು ಕೊಂಚ ವಿಸ್ತರಣೆಯಾಗಿದ್ದು ತೆರಿಗೆ ಪಾವತಿದಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಆಡಿಟ್‌ ಮಾಡದ ಪ್ರಕರಣಗಳಲ್ಲಿ ಐಟಿಆರ್ ಸಲ್ಲಿಕೆಯ ಗಡುವು ವಿಸ್ತರಿಸಿದ್ದು, ಹೊಸ ಗಡುವನ್ನು ಪ್ರಕಟಿಸಿದೆ. ಇದರಂತೆ, ಐಟಿಆರ್ ಅಥವಾ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಗಡುವು ಜುಲೈ 31 ಇದ್ದದ್ದು, ಈಗ ಸೆಪ್ಟೆಂಬರ್ 15ಕ್ಕೆ ಮುಂದೂಡಲ್ಪಟ್ಟಿದೆ.

ಕೇಂದ್ರೀಯ ನೇರ ತೆರಿಗೆ ಮಂಡಳಿಯ ಸುತ್ತೋಲೆ ಪ್ರಕಾರ, ಐಟಿಆರ್ ಸಲ್ಲಿಕೆಯ ಗಡುವು ಮೀರಿ ಸಲ್ಲಿಕೆ ಮಾಡುವವರು ದಂಡ ಪಾವತಿಸಬೇಕಾಗುತ್ತದೆ. ಒಂದೊಮ್ಮೆ ಆದಾಯ ಪ್ರಮಾಣವು 5 ಲಕ್ಷ ರೂಪಾಯಿ ಮೀರಿದ್ದರೆ ಅಂತಹ ಸನ್ನಿವೇಶದಲ್ಲಿ 5000 ರೂಪಾಯಿ ದಂಡ ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಸೆಕ್ಷನ್ 234 ಎಫ್ ಪ್ರಕಾರ 1000 ರೂಪಾಯಿ ದಂಡ ಪಾವತಿಸಬೇಕಾಗುತ್...