ಭಾರತ, ಫೆಬ್ರವರಿ 1 -- ಆದಾಯ ತೆರಿಗೆ ಬಜೆಟ್ 2025; ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2025 ಮಂಡನೆಯಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆ 1) ಸತತ 8ನೇ ಬಜೆಟ್ ಮಂಡಿಸಿದ್ದು, ಆದಾಯ ತೆರಿಗೆ ವಿಚಾರವಾಗಿ ಮಹತ್ವದ ಘೋಷಣೆಯನ್ನು ಪ್ರಕಟಿಸಿದರು. ಇದು ಮಧ್ಯಮವರ್ಗದ ವೇತನದಾರರನ್ನು ಖುಷಿಪಡಿಸಿದೆ. ತೆರಿಗೆದಾರರಿಗೆ, ವಿಶೇಷವಾಗಿ ಮಧ್ಯಮ ವರ್ಗದವರಿಗೆ, ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಮೂಲಕ ಮತ್ತು ಹೆಚ್ಚು ಖರ್ಚು ಮಾಡಬಹುದಾದ ಆದಾಯವನ್ನು ಅವರ ಕೈಯಲ್ಲಿ ಬಿಡುವುದರ ಕಡೆಗೆ ಕೇಂದ್ರ ಬಜೆಟ್ ಗಮನ ಹರಿಸಿದ್ದು ಕಂಡುಬಂತು.

ಕೇಂದ್ರ ಸರ್ಕಾರದಿಂದ ವ್ಯಾಪಕವಾಗಿ ನಿರೀಕ್ಷಿಸಲ್ಪಟ್ಟಿರುವ ಒಂದು ಕ್ರಮ ಇದು. ಕೇಂದ್ರ ಬಜೆಟ್‌ 2025-26 ಮಧ್ಯಮ ವರ್ಗದವರಿಗೆ ತೆರಿಗೆ ಹೊರೆಯನ್ನು ಕಡಿಮೆ ಮಾಡುವಂತೆ ವಿನ್ಯಾಸಗೊಳಿಸಲಾದ ಪರಿಷ್ಕೃತ ಆದಾಯ ತೆರಿಗೆ ರಚನೆಯನ್ನು ಪರಿಚಯಿಸಿತು. ಹೊಸ ತೆರಿಗೆ ಆಡಳಿತವು ಸಾಕಷ್ಟು ಸರಳವಾಗಿದ್ದರೂ, ಇದು ಇನ್ನಷ್ಟು ನಿರಾಳ ಭಾವವನ್ನು ಮಧ್ಯಮ ವರ್ಗದ ವೇತನದಾರರಲ್ಲಿ ಮೂಡಿಸಿದೆ. ಇದು ಮುಂದಿನ ಹಣ...