ಭಾರತ, ಏಪ್ರಿಲ್ 12 -- ಹಲವು ಬಾಲಿವುಡ್ ನಟ-ನಟಿಯರು ಆತ್ಮಚರಿತ್ರೆ ಬರೆಯುವ ಮೂಲಕ ತಮ್ಮ ಬದುಕಿನ ಪುಟಗಳನ್ನು ಬಿಚ್ಚಿಟ್ಟಿದ್ದಾರೆ. ಅವರು ಬರೆದ ಪುಸ್ತಕಗಳನ್ನು ನಾವು ಕೂಡ ಖರೀದಿ ಮಾಡಿ ಓದಬಹುದು. ಹಾಗಾದರೆ ಯಾವೆಲ್ಲಾ ಬಾಲಿವುಡ್ ಸೆಲೆಬ್ರಿಟಿಗಳು ಆತ್ಮಚರಿತ್ರೆ ಬರೆದಿದ್ದಾರೆ, ಅವರ ಪುಸ್ತಕದ ಹೆಸರೇನು ಎಂಬುದನ್ನು ನೋಡೋಣ.

ಹಿರಿಯ ನಟ ನಾಸಿರುದ್ದೀನ್ ಶಾ ತಮ್ಮ ಆತ್ಮಚರಿತ್ರೆ 'ಆಂಡ್ ದೆನ್ ಒನ್ ಡೇ' ತಮ್ಮ ಬದುಕಿಗೆ ಸಂಬಂಧಿಸಿದ ಹಲವು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ರಿಷಿ ಕಪೂರ್ ತಮ್ಮ ಜೀವನಚರಿತ್ರೆ 'ಖುಲ್ಲಮ್ ಖುಲ್ಲಾ: ರಿಷಿ ಕಪೂರ್ ಅನ್‌ಸೆನ್ಸಾರ್ಡ್‌' ನಲ್ಲಿ ತಮ್ಮ ಕುರಿತ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಅನುಪಮ್ ಖೇರ್ ಅವರ ಆತ್ಮಚರಿತ್ರೆಯ ಹೆಸರು 'ಲೆಸನ್ಸ್ ಲೈಫ್ ಟಾಟ್ ಮಿ ಅನ್‌ನೋಯಿಂಗ್ಲಿ'. ಅವರು ಈ ಪುಸ್ತಕದಲ್ಲಿ ತಮ್ಮ ಜೀವನ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ದಿಲೀಪ್ ಕುಮಾರ್ ಅವರ ಆತ್ಮಚರಿತ್ರೆಯ ಹೆಸರು 'ದಿಲೀಪ್ ಕುಮಾರ್: ದಿ ಸಬ್‌ಸ್ಟೆನ್ಸ್ ಅಂಡ್ ದಿ ಶ್ಯಾಡೋ'. ಇದನ್ನು ಉದಯ ...