ಭಾರತ, ಮಾರ್ಚ್ 17 -- ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಅದೃಷ್ಟ ಕೈಕೊಟ್ಟಿದ್ದರೆ, ಪಿಸಿಬಿ ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು ಮುಟ್ಟಿದಲ್ಲೆಲ್ಲಾ ಕೈ ಸುಟ್ಟುಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ (Champions Trophy 2025) ಪಂದ್ಯಾವಳಿ ನಡೆಯಿತು. ಅರ್ಧಕ್ಕಿಂತ ಹೆಚ್ಚಿನ ಪಂದ್ಯಗಳು ನಡೆದಿದ್ದೇ ದುಬೈನಲ್ಲಾದರೂ, ಆತಿಥ್ಯದ ಹೆಸರು ಮಾತ್ರ ಪಾಕಿಸ್ತಾನಕ್ಕೆ. ಕಳೆದ 29 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ನಡೆದ ಇದೇ ಮೊದಲ ಜಾಗತಿಕ ಕ್ರಿಕೆಟ್ ಪಂದ್ಯಾವಳಿ ಇದಾಗಿದ್ದು, ಪಾಕಿಸ್ತಾನಕ್ಕೆ ದೊರಕಿದ್ದು ಸೋಲಿನ ಕಹಿ ಮಾತ್ರ. ಅಷ್ಟೇ ಅಲ್ಲ. ಟೂರ್ನಿ ಆಯೋಜಿಸಿ ಪಿಸಿಬಿಯು ನಷ್ಟದ ಮೇಲೆ ನಷ್ಟ ಅನುಭವಿಸಿದೆ.

ಸಂಪೂರ್ಣ ಪಂದ್ಯಾವಳಿಯ ಸಮಯದಲ್ಲಿ ಪಾಕಿಸ್ತಾನ ತವರಿನಲ್ಲಿ ಆಡಿದ್ದು ಕೇವಲ ಒಂದು ಪೂರ್ಣ ಪಂದ್ಯವನ್ನು ಮಾತ್ರ. ಇಷ್ಟಕ್ಕೆ ಬರೋಬ್ಬರಿ 869 ಕೋಟಿ ರೂ.ಗಳನ್ನು ಖರ್ಚು ಮಾಡಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಶೇಕಡಾ 85 ರಷ್ಟು ನಷ್ಟವನ್ನು ಅನುಭವಿಸ...