ಭಾರತ, ಏಪ್ರಿಲ್ 15 -- 2025ರ ಇಂಡಿಯನ್ ಪ್ರೀಮಿಯರ್ ಲೀಗ್​ 28 ಮತ್ತು 29ನೇ ಪಂದ್ಯದಲ್ಲಿ ಬ್ಯಾಟರ್​​ಗಳ ಬ್ಯಾಟನ್ನು ಮೈದಾನದ ಅಂಪೈರ್ಸ್ ಪರಿಶೀಲಿಸಿದ ಘಟನೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಸಾಧನವೊಂದನ್ನು ಬಳಸಿ ಬ್ಯಾಟ್ ಅಗಲ, ಎತ್ತರ ಪರಿಶೀಲನೆ ನಡೆಸಲಾಯಿತು. ಐಪಿಎಲ್ ಇತಿಹಾಸದಲ್ಲಿ ಇಂತಹ ಘಟನೆ ನಡೆದಿದ್ದು ಇದೇ ಮೊದಲು. ಹೀಗೆ ಬ್ಯಾಟ್ ಅಳೆಯಲು ಕಾರಣ ಏನೆಂದು ಕ್ರಿಕೆಟ್ ಪ್ರಿಯರು ಗೊಂದಲಕ್ಕೆ ಸಿಲುಕಿದ್ದಾರೆ. ಹಾಗಿದ್ದರೆ ಬ್ಯಾಟ್ ಎಷ್ಟು ಇಂಚು ಇರಬೇಕು? ಇಲ್ಲಿದೆ ಮಾಹಿತಿ.

ಏಪ್ರಿಲ್ 13ರಂದು ನಡೆದ ಡಬಲ್ ಹೆಡ್ಡರ್ ಪಂದ್ಯಗಳಲ್ಲಿ ಸಾಧನ ಬಳಸಿ ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಬ್ಯಾಟ್​ಗಳನ್ನು ಅಂಪೈರ್​ಗಳು​ ಪರಿಶೀಲನೆ ನಡೆಸಿದರು. ಗಾತ್ರದ ಮಿತಿಗಿಂತ ಹೆಚ್ಚಿದ್ದ ಬ್ಯಾಟ್​ಗಳನ್ನು ಬದಲಿಸಲಾಗಿದೆ. ಹಾರ್ದಿಕ್ ಅವರ ಬ್ಯಾಟ್ 4.25 ಇಂಚುಗಳ ಅನುಮತಿ ನೀಡಿರುವ ಅಳತೆಯಲ್ಲೇ ಇತ್ತು. ಆದರೆ ಡಬಲ್ ಹೆಡ್ಡರ್​​ನ ಆರಂಭಿಕ ಪಂದ್ಯದಲ್ಲಿ ಫಿಲ್ ಸಾಲ್ಟ್ ಮತ್ತು ಶಿಮ್ರಾನ್ ಹೆಟ...