ಭಾರತ, ಮಾರ್ಚ್ 10 -- ವಿಶ್ವಕ್ ಸೇನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ 'ಲೈಲಾ' ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಸಾಕಷ್ಟು ಜನ ಈ ಸಿನಿಮಾವನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಯಾಕೆಂದರೆ ಈ ಸಿನಿಮಾದಲ್ಲಿ ವಿಶ್ವಕ್ ಸೇನ್ ಸ್ತ್ರೀ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಥಿಯೇಟರ್‍‌ನಲ್ಲಿ ಬಿಡುಗಡೆಯಾದಾಗ ಈ ಸಿನಿಮಾ ನೆಗಟಿವ್ ಟಾಕ್ ಪಡೆದುಕೊಂಡಿತ್ತು. ಆದರೆ, ಒಟಿಟಿಗೆ ಆಗಮಿಸುತ್ತಿರುವ ಈ ಹೊತ್ತಿಗೆ ಸಿನಿಮಾ ಮತ್ತೆ ಜನಪ್ರಿಯತೆ ಗಳಿಸಲು ಸಿದ್ಧವಾಗುತ್ತಿದೆ. ಫೆಬ್ರವರಿ 14ರಂದು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಯಿತು. ಹಾಸ್ಯ, ಆಕ್ಷನ್ ಎರಡೂ ಈ ಸಿನಿಮಾದಲ್ಲಿದೆ.

ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಯಶಸ್ವಿ ಪ್ರದರ್ಶನ ಕಾಣದ ಕಾರಣ ಗಲ್ಲಾಪೆಟ್ಟಿಗೆಯಲ್ಲೂ ಅಷ್ಟೇನೂ ಸದ್ದು ಮಾಡಿರಲಿಲ್ಲ. ಈ ಸಿನಿಮಾ ಮಾರ್ಚ್ 7ರಂದು ಒಟಿಟಿಗೆ ಆಗಮಿಸುತ್ತದೆ ಎಂದು ಹೇಳಲಾಗಿತ್ತು, ಆದರೆ ಇನ್ನೂ ಎರಡು ದಿನ ತಡವಾಗಿ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಅಮೆಜಾನ್ ಪ್ರೈಂ ವಿಡಿಯೋ ಹಾಗೂ ಆಹಾ ಒಟಿಟಿಯಲ್ಲಿ ...