ಭಾರತ, ಏಪ್ರಿಲ್ 22 -- ಬೆಂಗಳೂರು: ಇಲ್ಲಿನ ಸಿವಿ ರಾಮನ್ ನಗರದ ಗೋಪಾಲನ್ ಗ್ರ್ಯಾಂಡ್ ಮಾಲ್ ಬಳಿ ಏಪ್ರಿಲ್ 21ರ ಬೆಳಿಗ್ಗೆ ವಾಯುಪಡೆಯ ವಿಂಗ್ ಕಮಾಂಡರ್​ ಶೀಲಾದಿತ್ಯ ಬೋಸ್ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿದ್ದ. ಇದು ದೊಡ್ಡ ಸಂಚಲನ ಮೂಡಿಸಿತ್ತು. ಬೈಕ್ ಸವಾರನೊಬ್ಬ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದಿದ್ದ. ಈ ವಿಡಿಯೋದಲ್ಲಿ ಆತನ ಮುಖದಲ್ಲಿ ರಕ್ತ ಸೋರುತ್ತಿತ್ತು. ಗಾಯಕ್ಕೆ ಬ್ಯಾಂಡೇಜ್ ಕಟ್ಟಿಕೊಂಡಿದ್ದ. ಇದೀಗ ಸಿಸಿಟಿವಿ ದೃಶ್ಯಗಳಲ್ಲಿ ವಿಂಗ್ ಕಮಾಂಡರ್​ ಅಸಲಿ ಬಣ್ಣ ಬಯಲಾಗಿದೆ. ತಾನು ಹೇಳಿದ್ದೆಲ್ಲವೂ ಅಪ್ಪಟ ಸುಳ್ಳು ಎಂದು ಗೊತ್ತಾಗಿದೆ. ತಾನೇ ಕನ್ನಡಿಗನನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಡ್ರಾಮಾ ಮಾಸ್ಟರ್​ ವಾಯುಪಡೆಯ ವಿಂಗ್ ಕಮಾಂಡರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ವ್ಯಾಪಕ ಚರ್ಚೆಯಾಗುತ್ತಿದೆ.

ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ತನ್ನದೇನು ತಪ್ಪೇ ಇಲ್ಲ ಎನ್ನುವ ರೀತಿ ಹೇಳಿಕೆ ಸಿಂಪತಿ ಗಿಟ್ಟಿಸ...