Hyderabad, ಫೆಬ್ರವರಿ 6 -- ಹೈದ್ರಾಬಾದ್‌: ನೆರೆಯ ಆಂಧ್ರಪ್ರದೇಶ ಹಾಗು ತೆಲಂಗಾಣ ರಾಜ್ಯದ ಹಲವು ಭಾಗಗಳಲ್ಲಿ ಕೋಳಿಗಳಿಗೆ ವೈರಸ್‌ ತಗುಲಿದೆ. ಇದರಿಂದ ಕೋಳಿಗಳು ಸಾವಿರಾರು ಸಂಖ್ಯೆಯಲ್ಲಿ ಸಾಯುತ್ತಿವೆ. ವೈರಸ್‌ ತಗುಲಿರುವುದು, ಕೋಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿರುವುದರಿಂದ ಎರಡೂ ರಾಜ್ಯಗಳ ಕುಕ್ಕುಟೋದ್ಯಮ ಆತಂಕಕ್ಕೆ ಸಿಲುಕಿದೆ. ಈವರೆಗೂ ವೈರಸ್‌ಗೆ ಮೂಲಕ ಕಾರಣ ಎನ್ನುವುದು ತಿಳಿದಿಲ್ಲ. ಎರಡೂ ರಾಜ್ಯಗಳಲ್ಲಿ ಪಶುಪಾಲನಾ ಇಲಾಖೆಯು ಕುಕ್ಕುಟಗಳ ಸಾವಿಗೆ ಕಾರಣವನ್ನು ಪತ್ತೆ ಹಚ್ಚಲು ಹೆಣಗಾಡುತ್ತಿದೆ. ಈಗಾಗಲೇ ಮೃತಪಟ್ಟಿರುವ ಕೋಳಿಗಳ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಎರಡೂ ರಾಜ್ಯಗಳ ಸರ್ಕಾರಗಳು ಜನರಿಗೆ ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿವೆ.

ತೆಲುಗು ಭಾಷಿಕ ಎರಡೂ ರಾಜ್ಯಗಳಲ್ಲಿನ ಕೋಳಿ ಉದ್ಯಮವು ಕಾಯಿಲೆಯಿಂದ ಬಳಲುತ್ತಿದೆ. ಕಳೆದ ಕೆಲವು ವಾರಗಳಿಂದ ಹೆಚ್ಚಿನ ಸಂಖ್ಯೆಯ ಕೋಳಿಗಳು ಸಾಯುತ್ತಿವೆ. ಪ್ರತಿ ವರ್ಷ ಡಿಸೆಂಬರ್-ಫೆಬ್ರವರಿ ನಡುವೆ ಕೋಳಿಗಳ ಸಾವು ಸ್ವಾಭಾವಿಕವಾಗಿದ್ದರೂ, ಈ ವರ್ಷ ಸಾವಿರಾರು ಕ...