Bangalore, ಫೆಬ್ರವರಿ 25 -- Karnataka Kumki Elephants: ಕರ್ನಾಟಕದ ಹಾಸನ- ಕೊಡಗು ಮಾತ್ರವಲ್ಲ. ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲೂ ಕಾಡಾನೆ ಉಪಟಳ ಮಿತಿ ಮೀರಿದೆ. ಹಲವು ಮಂದಿ ಕಾಡಾನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡವರು ಅಧಿಕ. ಅಲ್ಲದೇ ಬೆಳೆ ನಾಶವಾಗಿ ಕೆಲವು ಜಿಲ್ಲೆಗಳ ಅರಣ್ಯ ಗಡಿ ಪ್ರದೇಶದಲ್ಲಂತೂ ಬದುಕುವುದೇ ಕಷ್ಟ ಎನ್ನುವ ಸನ್ನಿವೇಶ ಆಂಧ್ರಪ್ರದೇಶದಲ್ಲಿ ನಿರ್ಮಾಣವಾಗಿದೆ. ಆನೆಗಳನ್ನು ಸೆರೆ ಹಿಡಿಯಲು ಬರೀ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಂದ ಆಗುವುದಿಲ್ಲ. ಅದಕ್ಕೆ ಪಳಗಿದ ಆನೆಗಳೇ ಬೇಕು. ಆಂಧ್ರಪ್ರದೇಶದಲ್ಲಿ ಆನೆ ಹಿಡಿಯುವ ಕಾರ್ಯಪಡೆ ಜತೆ ತರಬೇತಿ ಪಡೆದ ಆನೆಗಳಿದ್ದರೂ ಕುಮ್ಕಿ ಆನೆಗಳ ಕೊರತೆ ಎದುರಾಗಿದೆ. ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಹಾಗೂ ನಿಯಂತ್ರಿಸಲು ಈ ಕುಮ್ಕಿ ಆನೆಗಳೇ ಬೇಕು. ಕರ್ನಾಟಕ ಅರಣ್ಯ ಇಲಾಖೆ ಸುಪರ್ದಿಯಲ್ಲಿರುವ ಕುಮ್ಕಿ ಆನೆಗಳನ್ನು ಪಡೆಯಲು ಐದು ತಿಂಗಳ ಹಿಂದೆಯೇ ಒಪ್ಪಂದ ಮಾಡಿಕೊಳ್ಳಲಾಗಿತ್ತು.ಈಗಲೂ ಕುಮ್ಕಿ ಆನೆಗಳಿಗೆ ಆಂಧ್ರ ಪ್ರದೇಶ ಅರಣ್ಯ ಇಲಾಖೆ ಕಾಯುತ್ತಲೇ ಎಂದ...