Bengaluru, ಮೇ 19 -- ತುಮಕೂರು: ಆಂಧ್ರ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗಿದ್ದ ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದ 6 ಮಂದಿಯ ಪೈಕಿ ಕಾರು ಅಪಘಾತಕ್ಕೀಡಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ (43), ಬಿಜೆಪಿ ಯುವ ಮೋರ್ಚಾ ತಾಲೂಕು ಮಾಜಿ ಅಧ್ಯಕ್ಷ ಸಂತೋಷ್ (37) ಹಾಗೂ ಲೋಕೇಶ್ (37) ಸಾವನ್ನಪ್ಪಿದ ದುದೈರ್ವಿಗಳಾಗಿದ್ದಾರೆ. ಇವರ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ ದರ್ಶನ್, ಶಶಿಕುಮಾರ್, ನಡುವನಹಳ್ಳಿ ಶಿವಾನಂದ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂತೋಷ್ ಅವರ ಹುಟ್ಟುಹಬ್ಬದ ಅಂಗವಾಗಿ 6 ಮಂದಿ ಇನೋವಾ ಕಾರಿನಲ್ಲಿ ಮಂತ್ರಾಲಯ ಹಾಗೂ ಶ್ರೀಶೈಲಕ್ಕೆ ಹೋಗಿ ಬರುವ ವೇಳೆ ಕರ್ನೂಲ್ ಬಳಿ ಕಾರು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ನಂತರ ಮೂರ್ನಾಲ್ಕು ಪಲ್ಟಿಯಾಗಿ ರಸ್ತೆಯ ಇಕ್ಕೆಲಕ್ಕೆ ಹೋಗಿ ಬಿದ್ದಿದೆ. ಇದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದ ನವೀನ್, ಸಂತೋಷ್, ಲೋಕೇಶ್ ಸ್ಥಳ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.