ಭಾರತ, ಏಪ್ರಿಲ್ 28 -- ವಾಣಿಜ್ಯ ನಗರಿ ಮುಂಬೈನ ಪ್ರತಿಷ್ಠಿತ ಆಲ್ಟಮೌಂಟ್ ರಸ್ತೆಯಲ್ಲಿರುವ ಮುಖೇಶ್ ಅಂಬಾನಿಯವರ ನಿವಾಸ ಆಂಟಿಲಿಯಾ, ವಿಶ್ವದ ಎರಡನೇ ಅತ್ಯಂತ ದುಬಾರಿ ಖಾಸಗಿ ವಸತಿ ಆಸ್ತಿಯಾಗಿದೆ. ಇದನ್ನು ಅಂದಾಜು 17,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದೇ ವೇಳೆ ದುಬೈನಲ್ಲಿರುವ, ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾವನ್ನು 2010ರಲ್ಲಿ 13,050 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಯ್ತು. ಈ ವೆಚ್ಚದ ಲೆಕ್ಕಾಚಾರದ ಪ್ರಕಾರ, ಮುಖೇಶ್‌ ಅಂಬಾನಿಯವರ ಮನೆ ನಿರ್ಮಾಣಕ್ಕಾದ ಖರ್ಚು, ಅತಿ ಎತ್ತರದ ಕಟ್ಟಡಕ್ಕಿಂತ ಹೆಚ್ಚು ಎಂಬುದು ತಿಳಿಯುತ್ತದೆ.

ಅಂಬಾನಿ ಅವರ ನಿವಾಸದ ಹೆಸರು ಆಂಟಿಲಿಯಾ. ಹಲವು ವಿಷಯಗಳಲ್ಲಿ ಇದು ಭಾರಿ ಜನಪ್ರಿಯವಾಗಿದೆ. ಸುಂದರ ವಾಸ್ತುಶಿಲ್ಪ, ಎಂಜಿನಿಯರಿಂಗ್ ಅದ್ಭುತಗಳ ವಿಷಯವಾಗಿ ಈ ಎರಡು ಕಟ್ಟಡಗಳ ಕುರಿತ ಹೋಲಿಕೆ ಇಲ್ಲಿದೆ.

ಅಂತಾರಾಷ್ಟ್ರೀಯ ವಾಸ್ತುಶಿಲ್ಪ ಸಂಸ್ಥೆಯಾದ ಪರ್ಕಿನ್ಸ್ & ವಿಲ್, ಆಂಟಿಲಿಯಾವನ್ನು ವಿನ್ಯಾಸಗೊಳಿಸಿದರೆ, ಲೈಟನ್ ಏಷ್ಯಾ ಇದನ್ನು ನಿರ್ಮಿಸಿದೆ. ಮುಂಬೈನಲ್ಲಿರುವ...