ಭಾರತ, ಫೆಬ್ರವರಿ 8 -- Swati Maliwal: ದೆಹಲಿ ವಿಧಾನ ಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಮತ್ತು ಅರವಿಂದ್ ಕೇಜ್ರಿವಾಲ್ ಸೋಲು ಖಚಿತವಾಗುತ್ತಿದ್ದಂತೆ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ನೀಡಿದ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಸ್ವಾತಿ ಮಲಿವಾಲ್‌ ಕೂಡ ಆಮ್ ಆದ್ಮಿ ಪಾರ್ಟಿಯವರೇ ಆಗಿದ್ದು, ಕಳೆದ ವರ್ಷ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಸಂಘರ್ಷಕ್ಕೆ ಇಳಿದು ಸುದ್ದಿಯಾಗಿದ್ದರು. ಇಂದು ಮಧ್ಯಾಹ್ನ ಅರವಿಂದ್ ಕೇಜ್ರಿವಾಲ್ ಅವರು ಸೋಲು ಕಾಣುವುದು ಖಚಿತವಾದ ಕೂಡಲೇ ಸ್ವಾತಿ ಮಲಿವಾಲ್ ಎರಡು ಟ್ವೀಟ್ ಮಾಡಿದ್ದಾರೆ. ಅದು ಸಂಚಲನ ಮೂಡಿಸಿದೆ.

"ನಾವು ಇತಿಹಾಸವನ್ನು ಗಮನಿಸಿದರೆ,- ಯಾವುದೇ ಮಹಿಳೆಗೆ ಏನಾದರೂ ತಪ್ಪು ಸಂಭವಿಸಿದಲ್ಲಿ, ದೇವರು ಅದನ್ನು ಮಾಡಿದವರಿಗೆ ಶಿಕ್ಷೆ ವಿಧಿಸಿರುವುದನ್ನು ಕಾಣಬಹುದು ... ಇಂದು ನೀರಿನ ಮಾಲಿನ್ಯ, ವಾಯುಮಾಲಿನ್ಯ ಮತ್ತು ಬೀದಿಗಳ ಸ್ಥಿತಿಯಂತಹ ವಿಷಯಗಳಿಂದಾಗಿ, ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಅವರು (ಎಎಪಿ) ಸ...