ಭಾರತ, ಏಪ್ರಿಲ್ 23 -- ಜೀ ಕನ್ನಡದಲ್ಲಿ ಇನ್ನೇನು ಮೇ ತಿಂಗಳಲ್ಲಿ ಹೊಸ ಧಾರಾವಾಹಿ ʻಶ್ರೀ ರಾಘವೇಂದ್ರ ಮಹಾತ್ಮೆʼ ಶುರುವಾಗುವ ಸಾಧ್ಯತೆಗಳಿವೆ. ಆ ಸೀರಿಯಲ್‌ ಆಗಮನಕ್ಕೆ ಈಗಾಗಲೇ ಪ್ರಸಾರ ಕಾಣುವ ಸೀರಿಯಲ್‌ವೊಂದು ಮುಕ್ತಾಯವಾಗಬೇಕಿದೆ. ಆ ಧಾರಾವಾಹಿ ಯಾವುದು ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಆದರೆ, ಯಾವ ಸೀರಿಯಲ್‌ ಕೊನೆಯಾಗಬಹುದು ಎಂದು ಯೋಚಿಸಿದರೆ, ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿ ಆ ಲಿಸ್ಟ್‌ನಲ್ಲಿ ಕಾಣಿಸುತ್ತವೆ. ಈಗಾಗಲೇ ಶುಭಂಗೆ ಈ ಸೀರಿಯಲ್‌ ಸನಿಹದಲ್ಲಿದೆ. ಇದೀಗ ʻಸೀತಾ ರಾಮʼ ಸೀರಿಯಲ್‌ ಎದುರಾಗಿರುವ ರೋಚಕ ಟ್ವಿಸ್ಟ್‌ಗಳನ್ನು ನೋಡಿದರೆ, ಇನ್ನೇನು ಶೀಘ್ರದಲ್ಲಿಯೇ ಈ ಧಾರಾವಾಹಿಯೂ ಅಂತ್ಯಕಾಣಲಿದೆ ಎನ್ನಲಾಗುತ್ತಿದೆ.

ಸಿಹಿ ಸತ್ತಿದ್ದಾಳೆ ಎಂಬ ವಿಚಾರವನ್ನು ಭಾರ್ಗವಿ ಚಿಕ್ಕಿ ಸೀತಾಳ ಗಮನಕ್ಕೆ ತಂದಿದ್ದಾಳೆ. ಅಪಘಾತದ ಸಮಯದಲ್ಲಿ ಏನೆಲ್ಲ ಆಯಿತು ಎಂಬುದನ್ನು ಎಳೆ ಎಳೆಯಾಗಿ ಹೇಳಿದ್ದಾಳೆ. ಭಾರ್ಗವಿಯ ಮಾತು ಕೇಳಿ, ಗಾಬರಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಸೀತಾ. ಇತ್ತ ಭಾರ್ಗವಿಯ ಮಾತಿಗೆ ಆಕೆಯ ಮೇಲೆಯೇ ಎರಗ...