ಭಾರತ, ಮಾರ್ಚ್ 25 -- ಲಕ್ನೋ ಸೂಪರ್ ಜೈಂಟ್ಸ್ ಜೇಬಲ್ಲಿದ್ದ ಗೆಲುವನ್ನು ಕಿತ್ತುಕೊಂಡು ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ 1 ವಿಕೆಟ್ ರೋಚಕ ಜಯ ತಂದುಕೊಟ್ಟ ಬಲಗೈ ಬ್ಯಾಟರ್​ ಅಶುತೋಷ್ ಶರ್ಮಾ, ಒಮ್ಮೆ ಖಿನ್ನತೆಗೆ ಒಳಗಾಗಿದ್ದರಂತೆ! 2024ರ ಆವೃತ್ತಿಯ ಐಪಿಎಲ್​ನಲ್ಲೂ ಪಂಜಾಬ್ ಕಿಂಗ್ಸ್ ಪರವೂ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದ ಅಶುತೋಷ್​, ಈಗ ತಮ್ಮ ಬ್ಯಾಟಿಂಗ್​ನಿಂದ ಎದುರಾಳಿ ತಂಡಗಳಿಗೆ ಖಿನ್ನತೆ ಉಂಟು ಮಾಡುತ್ತಿದ್ದಾರೆ!

ವಿಶಾಖಪಟ್ಟಣದ ವೈಎಸ್ ರಾಜಶೇಖರರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ನೀಡಿದ್ದ 210 ರನ್ ಗುರಿ ಬೆನ್ನಟ್ಟಿದ್ದ ಡೆಲ್ಲಿ 65 ರನ್​ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಭೀತಿಗೆ ಸಿಲುಕಿತ್ತು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಕಣಕ್ಕಿಳಿದು ಅಶುತೋಷ್​, ವಿಪ್ರಜ್ ನಿಗಮ್ ಜೊತೆಗೂಡಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಕೇವಲ 31 ಬಾಲ್​ಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಿತ ಅಜೇಯ 66 ರನ್​ ಸಿಡಿಸಿ ಗೆಲುವಿನ ರೂವಾರಿಯಾದರು.

ಆರಂಭಿಕ 20 ಎಸೆತಗಳಲ್ಲಿ 20 ರನ್ ಗಳಿಸಿದ್ದ ಮಧ್ಯಪ್ರದೇಶದ...