ಭಾರತ, ಮಾರ್ಚ್ 24 -- ರೋಚಕ ಕ್ಷಣಕ್ಕೆ ಸಾಕ್ಷಿಯಾದ ಇಂಡಿಯನ್ ಪ್ರೀಮಿಯರ್ ಲೀಗ್ 4ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿದೆ. ಸೋಲುವ ಪಂದ್ಯದಲ್ಲಿ 1 ವಿಕೆಟ್ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಅಭಿಯಾನ ಆರಂಭಿಸಿದೆ. ಅಶುತೋಷ್ ಶರ್ಮಾ (66) ಆರ್ಭಟಕ್ಕೆ ಬೆಚ್ಚಿದ ಲಕ್ನೋ ಸೂಪರ್ ಜೈಂಟ್ಸ್​, ತಾನು ಮಾಡಿದ ತಪ್ಪುಗಳಿಂದಲೇ ಗೆಲ್ಲುವ ಪಂದ್ಯ ಕೈ ಚೆಲ್ಲುವ ಮೂಲಕ ತೀವ್ರ ಮುಖಭಂಗಕ್ಕೆ ಗುರಿಯಾಯಿತು.

ಮಿಚೆಲ್ ಮಾರ್ಷ್ (72) ಮತ್ತು ನಿಕೋಲಸ್ ಪೂರನ್ (75) ಅವರ ಸ್ಫೋಟಕ ಬ್ಯಾಟಿಂಗ್​ ಬಲದಿಂದ ದೊಟ್ಟ ಮೊತ್ತ ಪೇರಿಸಿದ ಹೊರತಾಗಿ ಲಕ್ನೋ ಶುಭಾರಂಭ ಮಾಡುವಲ್ಲಿ ವಿಫಲವಾಯಿತು. ನೂತನ ನಾಯಕನೊಂದಿಗೆ ಕಣಕ್ಕಿಳಿದ ಉಭಯ ತಂಡಗಳ ಪೈಕಿ ಅಕ್ಷರ್​ ಪಟೇಲ್ ನೇತೃತ್ವದಲ್ಲಿ ಡೆಲ್ಲಿ ಜಯದ ಸಿಹಿ ಕಂಡಿದೆ. ವಿಶಾಖಪಟ್ಟಣದ ವೈಎಸ್​ ರಾಜಶೇಖರರೆಡ್ಡಿ ಕ್ರಿಕೆಟ್ ಮೈದಾನವು ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು.

ಟಾಸ್ ಗೆದ್ದ ಡೆಲ್ಲಿ, ಲಕ್ನೋ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನ ಮಾಡಿತು. ಅದರಂತೆ ಇನ್ನಿಂಗ್ಸ್ ಆರಂಭಿಸಿದ ಲಕ್ನೋ ತಂ...