ಭಾರತ, ಮಾರ್ಚ್ 8 -- ಹೆಣ್ಣಿನ ಮನಸನ್ನು ಅರ್ಥ ಮಾಡಿಕೊಳ್ಳುವುದು ಕಠಿಣ, ಆದರೆ ಅಸಾಧ್ಯ ಖಂಡಿತ ಅಲ್ಲ. ಬಹಳ ಕ್ಲೈಂಟ್‌ಗಳು ನನ್ನಲ್ಲಿ ಕೇಳುವ ಪ್ರಶ್ನೆ ಇದು. ಅವಳಿಗೆ ಏನು ಬೇಕು ಅಂತಲೇ ಅರ್ಥ ಆಗಲ್ಲ ಅನ್ನೋದು. ಕೆಲವು ಹೆಣ್ಣುಮಕ್ಕಳು ಹಣ ಸಂಪಾದಿಸಿ ಮನೆ-ಮಕ್ಕಳನ್ನು ಚೆನ್ನಾಗಿ ನೋಡಿಕೊ ಎನ್ನುತ್ತಾರೆ, ಇನ್ನೂ ಕೆಲವರು ನನಗೆ ಪ್ರೀತಿ, ಕಾಳಜಿ, ಭಾವನಾತ್ಮಕ ಬೆಂಬಲ ಬೇಕು ಎನ್ನುತ್ತಾರೆ. ಕೆಲವು ಹುಡುಗಿಯರು ಹುಡುಗ ಸ್ಟ್ರಾಂಗ್ ಆಗಿರಬೇಕು ಅಂದ್ರೆ, ಇನ್ನೂ ಕೆಲವರು ಹುಡುಗ ಹೆಂಗರಳಿನವರಾಗಿರಬೇಕು ಎನ್ನುತ್ತಾರೆ. ಕೆಲವರು ನನ್ನ ಹುಡುಗ ಮಾನಸಿಕವಾಗಿ ಗಟ್ಟಿ ಇರಬೇಕು ಎಂದೂ ಕೂಡ ಹೇಳುತ್ತಾರೆ. ಅಷ್ಟಕ್ಕೂ ಹೆಣ್ಣುಮಕ್ಕಳು ಬಯಸುವುದೇನು?

ಈ ಆಸೆಗಳು ಆಕಸ್ಮಿಕವಲ್ಲ, ಅವಳ ವ್ಯಕ್ತಿತ್ವ, ಅವಳು ಬೆಳೆದು ಬಂದ ವಾತಾವರಣ, ಅವಳನ್ನು ಹಾಗೂ ಅವಳ ಆಸೆಯನ್ನು ರೂಪಿಸುತ್ತದೆ. ಭೂಮಿ ಇರುವ ಹಾಗೆ ನೀರು ಹರಿಯುವಂತೆಯೇ, ಒಂದು ಸಂಬಂಧದಲ್ಲಿ ಹೆಣ್ಣಿನ ನಿರೀಕ್ಷೆಗಳು ಅವಳ ಹಿನ್ನಲೆಗಳಂತೆಯೇ ಮೂಡುತ್ತವೆ.

ಯಾವ ರೀತಿಯ ವ್ಯಕ್ತಿತ್ವ ಅಥವಾ ಬದುಕು ಅವಳು ...