ಭಾರತ, ಏಪ್ರಿಲ್ 15 -- ಬಾಲಿವುಡ್ ನಟ, ಉದ್ಯಮಿ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಇತ್ತೀಚೆಗೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಆ ಮೂಲಕ ಸುನಿಲ್ ಅಜ್ಜನ ಪಟ್ಟಕ್ಕೇರಿದ್ದಾರೆ. ಕ್ರಿಕೆಟಿಗ ಕೆಎಲ್‌ ರಾಹುಲ್ ಹಾಗೂ ಆಥಿಯಾ ಮಾರ್ಚ್ 24 ರಂದು ಹೆಣ್ಣುಮಗುವನ್ನು ಬರ ಮಾಡಿಕೊಂಡಿದ್ದರು. ಮನೆಯಲ್ಲಿ ಮಗು ಬಂದಾಗ ಅದರ ಸಂಭ್ರಮ, ಖುಷಿ ಮನೆಯವರಷ್ಟೇ ಅನುಭವಿಸಲು ಸಾಧ್ಯ, ಇದು ಸೆಲೆಬ್ರಿಟಿಗಳಿಗೂ ಹೊರತಾಗಿಲ್ಲ.

ಇದೀಗ ಸುನಿಲ್ ಶೆಟ್ಟಿ ಕೂಡ ಮೊಮ್ಮಗಳು ಮನೆಗೆ ಬಂದ ನಂತರ ತಾವು ಅನುಭವಿಸುತ್ತಿರುವ ಖುಷಿಯ ಕ್ಷಣಗಳ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ. ಜೀವನದ ಸರಳ ಕ್ಷಣಗಳು ಸಂತೋಷದ ನಿಜವಾದ ಅರ್ಥವನ್ನು ಹೇಗೆ ಬಹಿರಂಗಪಡಿಸುತ್ತವೆ ಎಂಬುದನ್ನು ಅವರು ತಮ್ಮ ಬರಹದಲ್ಲಿ ಹೇಳಿಕೊಂಡಿದ್ದಾರೆ.

ಲಿಂಕ್ಡ್ ಇನ್‌ನಲ್ಲಿ ಸುನಿಲ್ ಶೆಟ್ಟಿ ಈ ರೀತಿ ಬರೆದುಕೊಂಡಿದ್ದಾರೆ. 'ಜೀವನ ನಿಜವಾಗ್ಲೂ ತಮಾಷೆ ಅನ್ನಿಸುತ್ತೆ. ನಮಗೆ ಸಂತೋಷ ನೀಡುತ್ತೆ ಅಂತ ನಾವು ಅಂದುಕೊಳ್ಳುವ ವಿಷಯಗಳ ಬೆನ್ನಟ್ಟಿ ಹೋಗುತ್ತಾ ನಾವು ಹಲವು ವರ್ಷಗಳನ್ನು ಕಳೆದಿರುತ್...