Bengaluru, ಮೇ 3 -- ಜೀ ಕನ್ನಡದ ಬಹುನಿರೀಕ್ಷಿತ ಕರ್ಣ ಧಾರಾವಾಹಿಯ ಎರಡನೇ ಪ್ರೋಮೋ ಬಿಡುಗಡೆ ಆಗಿದೆ. ಈ ಪ್ರೋಮೋದಲ್ಲಿ ಕಥಾನಾಯಕ ಕರ್ಣನ ಪ್ರೇಯಸಿ ಯಾರು ಎಂಬುದನ್ನು ರಿವೀಲ್ ಮಾಡಲಾಗಿದೆ.
ಈ ಹಿಂದೆಯೇ ಕರ್ಣ ಸೀರಿಯಲ್‌ನಲ್ಲಿ ಕಿರಣ್ ರಾಜ್‌ಗೆ ಜೋಡಿಯಾಗಿ ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಜೋಡಿಯಾಗಲಿದ್ದಾರೆ ಎಂಬ ಸುದ್ದಿಯಿತ್ತು. ಈಗ ಅಧಿಕೃತವಾಗಿ ಎರಡನೇ ಪ್ರೋಮೋದಲ್ಲಿ ಭವ್ಯಾ ಗೌಡ ಕಂಡಿದ್ದಾರೆ.
ಅಂದಹಾಗೆ, ಕರ್ಣ ಸೀರಿಯಲ್‌ನಲ್ಲಿ ಮೆಡಿಕಲ್ ಕಲಿಯುವ ವಿದ್ಯಾರ್ಥಿಯಾಗಿ ಭವ್ಯಾ ಗೌಡ ಅವರ ಪಾತ್ರ ಸಾಗುತ್ತದೆ. ಅವರಿಗಿಲ್ಲಿ ನಿಧಿ ಹೆಸರಿನ ಪಾತ್ರ.
ಎಲ್ಲ ಜೀವಗಳ ನೋವಿಗೂ ಮಿಡಿಯುವವನಾಗಿ ಕರ್ಣ ಕಂಡರೆ, ಆ ಕರ್ಣನ ಹೆಸರೇ ನಿಧಿಯ ಉಸಿರು ಎಂಬಂತೆ ಪ್ರೋಮೋದಲ್ಲಿ ಚಿತ್ರೀಕರಿಸಲಾಗಿದೆ.
ಚೆಂದದ ಹಾಡಿನ ಮೂಲಕ ಈ ಜೋಡಿಯ ನಡುವಿನ ಸಂಬಂಧ ಹೇಗಿರಲಿದೆ ಎಂಬುದನ್ನು ಚಿತ್ರೀಕರಿಸಿದ್ದಾರೆ ನಿರ್ದೇಶಕರು. ಇನ್ನೇನು ಶೀಘ್ರದಲ್ಲಿಯೇ ಈ ಸೀರಿಯಲ್ ಶುರುವಾಗಲಿದೆ.
ಅಂದಹಾಗೆ ಮನು ಜಿ ಎಚ್ ಈ ಧಾರಾವಾಹಿಯ ನಿರ್ದೇಶಕರು. ಶ್ರೀಶ ಕುದುವಳ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.