Bangalore, ಏಪ್ರಿಲ್ 29 -- ನಟಿ, ರೂಪದರ್ಶಿ ಮಯೂರಿ ಕ್ಯಾತರಿ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ಮಯೂರಿ ಕ್ಯಾತರಿ ಮತ್ತು ಅರುಣ್‌ ಕುಮಾರ್‌ಗೆ ಒಬ್ಬ ಗಂಡು ಮಗನಿದ್ದಾನೆ. ತನ್ನ ಮಗನ ಜತೆ ನಟಿ ಇದೀಗ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಮಯೂರಿ ಕುಟುಂಬದಲ್ಲಿ ಏನೋ ಸರಿ ಇಲ್ಲ. ಇವರು ಪತಿಯಿಂದ ದೂರಾವಾಗಿದ್ದಾರೆ ಎಂಬ ಸುದ್ದಿಯೂ ಹಿಂದೊಮ್ಮೆ ಹಬ್ಬಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ಮಗನ ಜತೆಗೆ ಮಾತ್ರ ಫೋಟೋ ಹಂಚಿಕೊಳ್ಳುತ್ತಿದ್ದಾರೆ.

ಮಯೂರಿಯವರು ತನ್ನ ಮಗನ ಜತೆಗೆ ಫೋಟೋಶೂಟ್‌ ಮಾಡಿಸಿಕೊಂಡಿದ್ದು, ಆ ಫೋಟೋಗಳ ಗೊಂಚಲನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳಿಗೆ "ಅವನಿಲ್ಲದೆ ನಾನೇನು ಮಾಡಲಿ?" "ವಾಟ್‌ ವುಡ್‌ ಡು ಐ ಡು ವಿದೌಟ್‌ ಹಿಮ್‌" ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಈ ಮೂಲಕ ಮಗನೇ ನನ್ನ ಪ್ರಪಂಚ, ಮಗನೇ ನನ್ನ ಎಲ್ಲವೂ ಎಂದು ತಿಳಿಸಿದ್ದಾರೆ. ಈ ಸುಂದರ ಫೋಟೋಗಳಿಗೆ ಅಭಿಮಾನಿಗಳು ವಾಹ್‌ ಎಂದಿದ್ದಾರೆ. ಮಗ ಮುದ್ದಾಗಿದ್ದಾನೆ ಎಂದು ಕಾಮೆಂಟ್‌ ಮಾಡಿದ್ದಾರೆ.

ಈ ಫೋಟೋಶೂಟ್‌ಗ...