ಭಾರತ, ಫೆಬ್ರವರಿ 8 -- ಪ್ರೀತಿಸುವ ವಿಧಾನ ಪ್ರತಿಯೊಬ್ಬರಲ್ಲೂ ಭಿನ್ನವಾಗಿರುತ್ತದೆ. ಹಲವರು ತಮ್ಮ ಸಂಗಾತಿಯೊಂದಿಗೆ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಮತ್ತಷ್ಟು ಜನ ದೂರದಲ್ಲಿದ್ದು ಕೆಲ ದಿನಗಳಿಗೊಮ್ಮೆ ಪರಸ್ಪರ ಭೇಟಿಯಾಗುತ್ತಿರುತ್ತಾರೆ. ತಮ್ಮ ಸಂಗಾತಿಯು ಪರ ಊರು, ದೇಶ-ವಿದೇಶಗಳಲ್ಲಿದ್ದಾಗ ಪರಸ್ಪರ ಭೇಟಿಯಾಗಿ ಮನಸಿನ ಮಾತನ್ನು ಹಂಚಿಕೊಳ್ಳುವುದು ಅಸಾಧ್ಯವೇ. ಆದರೂ ಅವರ ಪ್ರೀತಿ ಮಾತ್ರ ಅಗಾಧವಾಗಿರುತ್ತದೆ.

'ಅವನಲ್ಲಿ ಇವಳಿಲ್ಲಿ ಮಾತಿಲ್ಲ ಕಥೆಯಿಲ್ಲ, ಎದುರೆದುರು ಬಂದಾಗ ಹೆದರೆದರಿ ನಿಂತಾಗ, ಅಲ್ಲೇ ಆರಂಭ ಪ್ರೇಮ' ಎನ್ನುವ ಹಾಡಿನಂತೆ ಈ ಪ್ರೀತಿಯು ಕೂಡ. ದೂರವಿದ್ದರೆ ಪ್ರೀತಿಯಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ಮಾತುಗಳು ಕೇಳಿಬರುವುದು ಸಹಜವೇ. ಆದರೆ ವಾಸ್ತವದಲ್ಲಿ ದೂರವಿರುವ ಪ್ರೀತಿ ಹೆಚ್ಚು ಕಾಲ ಉಳಿದಿರುವುದನ್ನು ನಾವು ಸಾಕಷ್ಟು ಕಡೆಗಳಲ್ಲಿ ನೋಡಿರುತ್ತೇವೆ. ಅಂತೆಯೇ ಈ ಲೇಖನದಲ್ಲಿ ದೂರದಲ್ಲಿದ್ದು ಪ್ರೇಮಿಸುವವರಿಗೆ ಒಂದಷ್ಟು ಟಿಪ್ಸ್ ನೀಡುತ್ತಿದ್ದೇವೆ.

ಹೌದು, ನಮಗೆ ದೂರದಲ್ಲಿದ್ದು ಪ್ರೀತಿಸುವವರ ಸ...