ಭಾರತ, ಏಪ್ರಿಲ್ 7 -- ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ ಜೋನಾಸ್, ಅಟ್ಲಿ ಹಾಗೂ ಅಲ್ಲು ಅರ್ಜುನ್ ಕಾಂಬಿನೇಷನ್‌ನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಗಾಳಿಸುದ್ದಿ ಸಿನಿ ಪ್ರೇಕ್ಷಕರಿಗೆ ಸಾಕಷ್ಟು ಖುಷಿ ನೀಡಿತ್ತು. ಈ ಮೂವರ ಕಾಂಬಿನೇಷನ್‌ನ ಚಿತ್ರಕ್ಕಾಗಿ ಸಿನಿ ಪ್ರೇಮಿಗಳು ಎದುರು ನೋಡುತ್ತಿದ್ದರು. ಆದರೆ ಇದು ಕೇವಲ ಗಾಳಿಸುದ್ದಿಯಾಗಿದ್ದು, ಪ್ರಿಯಾಂಕಾ, ಅಲ್ಲು ಅರ್ಜುನ್ ಮುಂದಿನ A6 (ಅನಧಿಕೃತ ಹೆಸರು) ಚಿತ್ರದಲ್ಲಿ ನಟಿಸುತ್ತಿಲ್ಲ, ಇದು ಕೇವಲ ವದಂತಿಯಷ್ಟೇ ಎಂಬುದು ಖಚಿತವಾಗಿದೆ. ಈ ಸುದ್ದಿಯಿಂದ ಅಭಿಮಾನಿಗಳಿಗೆ ನಿರಾಸೆ ಕಾಡುವುದು ಖಚಿತ. ಆದರೆ ಈ ಗಾಳಿ ಸುದ್ದಿ ಹರಡುವ ಹಿಂದೆ ಕಾರಣವೂ ಇದೆ.

ಕಳೆದ ಕೆಲವು ದಿನಗಳಿಂದ ಅಟ್ಲಿ ಸಿನಿಮಾದಲ್ಲಿ ಪ್ರಿಯಾಂಕ ಚೋಪ್ರಾ ನಟಿಸುತ್ತಾರೆ ಎಂಬ ಗಾಳಿಸುದ್ದಿ ಜೋರಾಗಿಯೇ ಕೇಳಿಬರುತ್ತಿತ್ತು. ಅದಕ್ಕೆ ಕಾರಣ ಅಟ್ಲಿ ಹಾಗೂ ಪ್ರಿಯಾಂಕ ಚೋಪ್ರಾ ನಡುವೆ ನಡೆದಿದೆ ಎನ್ನಲಾದ ಮಾತುಕತೆಗಳು. ಸಿನಿಮಾವೊಂದರ ವಿಚಾರವಾಗಿ ಅಟ್ಲಿ ಪ್ರಿಯಾಂಕಾ ಚೋಪ್ರಾ ಅವರನ್ನು ಸಂಪರ್ಕಿಸಿ, ಮಾತುಕತೆ ನಡೆಸ...