ಭಾರತ, ಮಾರ್ಚ್ 23 -- ಪಾಕಿಸ್ತಾನ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಟಿ20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆ 3-1 ಅಂತರದಿಂದ ವಶಪಡಿಸಿಕೊಂಡಿದೆ. ಪಂದ್ಯದಲ್ಲಿ ಕಿವೀಸ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದರೆ, ಪಾಕಿಸ್ತಾನ ಅಲ್ಪ ಮೊತ್ತಕ್ಕೆ ಕುಸಿಯಿತು. ಕೊನೆಯ ಪಂದ್ಯದಲ್ಲಿ ಯಶಸ್ವಿ ರನ್‌ ಚೇಸಿಂಗ್‌ ನಡೆಸಿದ್ದ ತಂಡವು, ಇಂದು ಅಚ್ಚರಿಯ ರೀತಿಯಲ್ಲಿ ಮುಗ್ಗರಿಸಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕಿವೀಸ್‌ 6 ವಿಕೆಟ್‌ ನಷ್ಟಕ್ಕೆ 220 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಪಾಕ್‌, ಆರಂಭದಿಂದಲೇ ಕುಸಿತ ಅನುಭವಿಸಿ ಕೇವಲ 16.2 ಓವರ್‌ಗಳಲ್ಲಿ 105 ರನ್‌ ಗಳಿಸಿ ಆಲೌಟ್‌ ಆಯ್ತು. ಇದರೊಂದಿಗೆ 115 ರನ್‌ಗಳಿಂದ ಸೋತಿತು.

ನ್ಯೂಜಿಲೆಂಡ್‌ ತಂಡ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್‌ ನಡೆಸಿತು. ಸೀಫರ್ಟ್ 22 ಎಸೆತಗಳಲ್ಲಿ 44 ರನ್‌ ಸಿಡಿಸಿದರು. ಮತ್ತೂ ಅಬ್ಬರಿಸಿದ ಫಿನ್‌ ಅಲೆನ್‌, 20 ಎಸೆತಗಳಲ್ಲಿ...