ಭಾರತ, ಮೇ 13 -- ಸ್ಯಾಮ್‌ಸಂಗ್ ಕಂಪನಿಯು ತನ್ನ ಹೊಸ ಅಲ್ಟ್ರಾ-ಸ್ಲಿಮ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಸ್ 25 ಎಡ್ಜ್ (Samsung Galaxy S25 Edge) ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ದಕ್ಷಿಣ ಕೊರಿಯಾದ ಪ್ರಸಿದ್ಧ ಕಂಪನಿಯು ಈ ಫೋನ್ ಬಿಡುಗಡೆಯ ಮೂಲಕ ತನ್ನ ಪ್ರಮುಖ ಗ್ಯಾಲಕ್ಸಿ ಎಸ್ ಸೀರೀಸ್‌ಗೆ ಸೇರಿಕೊಂಡಿರುವ ಹೊಸ ವರ್ಗದ ಸ್ಲಿಮ್ ಸ್ಮಾರ್ಟ್‌ಫೋನ್‌ಗಳನ್ನು ತಂದಿದೆ. ಹಲವು ಕಾರಣಗಳಿಂದ ವಿಶೇಷವಾಗಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 25 ಎಡ್ಜ್, ಕೇವಲ 5.8 ಎಂಎಂ ದಪ್ಪ ಮತ್ತು ಕೇವಲ 163 ಗ್ರಾಂ ತೂಕವಿದೆ.

ಗ್ಯಾಲಕ್ಸಿ ಎಸ್ 25 ಅಲ್ಟ್ರಾ ಮತ್ತು ಎಸ್ 25 ಎಡ್ಜ್ ನಡುವೆ ಹೋಲಿಕೆ ಮಾಡುವುದಾದರೆ, ಅಲ್ಟ್ರಾ 8.2 ಎಂಎಂ ದಪ್ಪ ಮತ್ತು 218 ಗ್ರಾಂ ತೂಕವಿದೆ. ಇದು ಈ ಎರಡು ಫೋನ್‌ಗಳ ನಡುವಿನ ಗಮನಾರ್ಹ ವ್ಯತ್ಯಾಸ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 25 ಎಡ್ಜ್ ಫೋನ್‌ನ ಇನ್ನಷ್ಟು ವೈಶಿಷ್ಟ್ಯಗಳನ್ನು ನೋಡೋಣ.

ಗ್ಯಾಲಕ್ಸಿ ಎಸ್ 25 ಎಡ್ಜ್ ಮಾದರಿಯನ್ನು ಇದರ ತೆಳು ಮತ್ತು ಬಾಳಿಕೆ ಬರುವ ರಚನೆಗಾಗಿ ಸ್ಯಾಮ್‌ಸಂಗ್ ಕಂಪನಿಯು ...