ಭಾರತ, ಜನವರಿ 26 -- ಚೊಚ್ಚಲ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದ್ದ ಅಲೆಕ್ಸಾಂಡರ್ ಝ್ವೆರೆವ್‌ಗೆ (Alexander Zverev) ನಿರಾಶೆಯಾಗಿದೆ. ಜರ್ಮನ್ ಟೆನಿಸ್‌ ಆಟಗಾರ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಯಾನಿಕ್ ಸಿನರ್ ವಿರುದ್ಧ ನೇರ ಸೆಟ್‌ಗಳಲ್ಲಿ ಸೋತು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟರು. ಸೋಲಿನ ನೋವಲ್ಲಿದ್ದ ಆಟಗಾರನಿಗೆ, ಮತ್ತೆ ಬೇಸರವಾಗುವಂತಾಗಿದೆ. ಪಂದ್ಯ ಮುಗಿದ ನಂತರ ರನ್ನರ್‌ ಅಪ್‌ ಭಾಷಣ ಮಾಡಲು ಮೈಕ್‌ ಮುಂದೆ ನಿಂತಾಗ ಸ್ಟೇಡಿಯಂನಿಂದ ಕೇಳಿ ಬಂದ ಘೋಷಣೆಗಳು ಝ್ವೆರೆವ್‌ಗೆ ಅಚ್ಚರಿ ಮೂಡಿಸಿತು. ಈ ಹಿಂದೆ ಆಟಗಾರನ ವಿರುದ್ಧ ಕೇಳಿಬಂದಿದ್ದ ದೈಹಿಕ ಕಿರುಕುಳ ಪ್ರಕರಣಗಳನ್ನು ನೆನಪಿಸುವ ಮೂಲಕ, ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೆಲ್ಬೋರ್ನ್‌ನಲ್ಲಿ ನಡೆದ ಟ್ರೋಫಿ ಪ್ರದಾನ ಸಮಾರಂಭದಲ್ಲಿ, ಝ್ವೆರೆವ್ ಮಾತನಾಡಲು ಮುಂದಾದಾಗ ಈ ಘಟನೆ ಸಂಭವಿಸಿದೆ. ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯಾದ ಪ್ರಕಾರ, ಮಹಿಳೆಯೊಬ್ಬರ ಧ್ವನಿ ಕೇ...