ಭಾರತ, ಮಾರ್ಚ್ 9 -- ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಫೈನಲ್​ಗೆ ಭಾರತ ತಂಡ ಸಜ್ಜಾಗಿದೆ. ಆದರೆ ಪ್ರಶಸ್ತಿ ಹೋರಾಟದ ನಂತರ ಭಾರತೀಯ ಕ್ರಿಕೆಟ್​ನಲ್ಲಿ ಬದಲಾವಣೆ ಪರ್ವ ಆರಂಭವಾಗಲಿದೆ. ಈ ಪರಿವರ್ತನೆಯ ಹಾದಿಯಲ್ಲಿ ಮೊದಲ ಬಲಿಪಶು ಅಂದರೆ ಅದು ಭಾರತದ ಪ್ರಸ್ತುತ ನಾಯಕ ರೋಹಿತ್ ಶರ್ಮಾ. ಫೈನಲ್ ನಂತರ ಅವರು ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ. ನಿವೃತ್ತಿ ಘೋಷಿಸಿಲ್ಲ ಎಂದಾದರೆ ತಮ್ಮ ನಾಯಕತ್ವದ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಆದರೆ ಅವರ ನಾಯಕತ್ವದ ಸ್ಥಾನವನ್ನು ತುಂಬಲು ಇಬ್ಬರ ನಡುವೆ ಬಲವಾದ ಪೈಪೋಟಿ ಏರ್ಪಟ್ಟಿದೆ.

ಬಾರ್ಡರ್​​-ಗವಾಸ್ಕರ್ ಟ್ರೋಫಿಯಲ್ಲಿ ಭಾರತ ತಂಡವು 3-1ರಿಂದ ಹೀನಾಯವಾಗಿ ಸೋತ ಬೆನ್ನಲ್ಲೇ ರೋಹಿತ್​ ನಾಯಕತ್ವ ಮತ್ತು ಅವರ ವೃತ್ತಿಜೀವನದ ಭವಿಷ್ಯದ ಪ್ರಶ್ನೆಗಳು ಶುರುವಾಗಿದ್ದವು. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ ಗೆಲ್ಲುತ್ತಿದ್ದಾಗ ಮೂಲೆಗುಂಪಾಗಿದ್ದ ಚರ್ಚೆಗಳು ನಾಯಿಕೊಡೆಗಳಂತೆ ಎದ್ದಿವೆ. ಯಾರೋ ಯಾಕೆ ಬಿಸಿಸಿಐ ವಲಯದಲ್ಲೇ ಹಿಟ್​ಮ್ಯಾನ್ ನಿವೃತ್ತಿ ಬಗ್ಗೆ ಚರ್...