ಭಾರತ, ಜುಲೈ 19 -- ಇಸ್ಲಾಮಾಬಾದ್: ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಚಿನ್ನದ ಪದಕ ಗೆದ್ದು ಪಾಕಿಸ್ತಾನವನ್ನು ವಿಶ್ವದಲ್ಲಿ ಮೆರೆಯಿಸಿದ ಜಾವೆಲಿನ್ ತಾರೆ ಅರ್ಷದ್ ನದೀಮ್ ಇದೀಗ ತಮ್ಮದೇ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿ ಸುದ್ದಿಯಲ್ಲಿದ್ದಾರೆ. ತಮ್ಮ ಸಾಧನೆಯ ನಂತರ ಸರ್ಕಾರದಿಂದ ಬಹುಕಾಲಿಕ ಬೆಂಬಲ, ಗೌರವ, ಬಹುಮಾನಗಳು ಘೋಷಣೆಯಾದರೂ, ಅವುಗಳಲ್ಲಿ ಬಹುಮಟ್ಟಿಗೆ ಯಾವುದೇ ಕೂಡಾ ನೆರವಿಗೆ ಬಂದಿಲ್ಲ ಎಂದು ನದೀಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಯೋ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅರ್ಷದ್ ನದೀಮ್, "ನನಗೆ ಘೋಷಿಸಿದ ಬಹುಮಾನಗಳಲ್ಲಿ ಪ್ರಮುಖವಾದದ್ದು ಒಂದು ಪ್ಲಾಟ್ ನೀಡುವ ವಿಷಯವಾಗಿತ್ತು. ಆದರೆ, ಇಂದು ತನಕ ಅದು ನನಗೆ ಸಿಕ್ಕಿಲ್ಲ. ಎಲ್ಲವೂ ಕಾಗದದ ಘೋಷಣೆಯಷ್ಟೇ ಉಳಿದಿವೆ. ಪದಕ ಗೆದ್ದಾಗ ಅಧಿಕಾರಿಗಳು ಮಾಡಿದ್ದ ಭರವಸೆ, ಮಾತುಗಳು ಇತ್ತೀಚೆಗೆ ಮರೆತುಹೋಗಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 28 ವರ್ಷದ ಜಾವೆಲಿನ್ ಎಸೆತಗಾರ ದಾಖಲೆಯ 92.97 ಮೀಟರ್ ಎಸೆದು ಟ್ರ್ಯಾಕ್...