Bengaluru, ಫೆಬ್ರವರಿ 27 -- ವಧುವಿನ ಕೇಶವಿನ್ಯಾಸ:ನಿಮ್ಮ ಮದುವೆ ನಿಶ್ಚಯವಾಗಿದ್ದರೆ,ಸಂಗೀತದಿಂದ ಆರತಕ್ಷತೆಯವರೆಗೆ ನಿಮ್ಮ ಕೇಶವಿನ್ಯಾಸ ಹೇಗಿರಬೇಕು ಎಂದು ಯೋಚಿಸಿರಬಹುದು. ಅನೇಕ ವಧುಗಳು ಕೊನೆಯ ಕ್ಷಣದವರೆಗೂ ಕೇಶವಿನ್ಯಾಸದ ಬಗ್ಗೆ ಗೊಂದಲದಲ್ಲಿರುತ್ತಾರೆ. ನೀವು ಕೂಡ ಗೊಂದಲಕ್ಕೊಳಗಾದ ವಧುಗಳಲ್ಲಿ ಒಬ್ಬರಾಗಿದ್ದರೆ, ನಿಮಗಾಗಿ ಕೆಲವು ಆಯ್ದ ವಧುವಿನ ಕೇಶವಿನ್ಯಾಸಗಳನ್ನು ಇಲ್ಲಿ ಚಿತ್ರ ಸಹಿತ ನೀಡಲಾಗಿದೆ. ಸಂಗೀತ, ಮೆಹಂದಿಯಿಂದ ಆರತಕ್ಷತೆಯವರೆಗೆ ಈ ಕೇಶವಿನ್ಯಾಸವನ್ನು ಪ್ರಯತ್ನಿಸಬಹುದು.

ಸ್ಲೀಕ್ ಬನ್:ಮಾಂಗ್ಟಿಕಾ ಹೊಂದಿರುವ ಸ್ಲೀಕ್ ಬನ್ ವಧುವಿನ ಒಂದು ಶ್ರೇಷ್ಠ ಕೇಶವಿನ್ಯಾಸವಾಗಿದೆ. ನೀವು ಕಡಿಮೆ ಮೇಕಪ್ ಲುಕ್‌ನಲ್ಲಿ ತಯಾರಾಗುತ್ತಿದ್ದರೆ, ಈ ರೀತಿಯ ಕೇಶವಿನ್ಯಾಸ ಕೂಡ ಆಕರ್ಷಕವಾಗಿ ಕಾಣುತ್ತದೆ.

ಫ್ರೆಂಚ್ ಬ್ರೇಡ್ ಕೇಶವಿನ್ಯಾಸ: ಪ್ರಜಕ್ತಾ ಕೋಲಿ ಎಂಬುವವರು ತಮ್ಮ ಮದುವೆಯ ಅರಶಿನ ಶಾಸ್ತ್ರಕ್ಕೆ ಫ್ರೆಂಚ್ ಜಡೆಯ ಕೇಶವಿನ್ಯಾಸ ಮಾಡಿದ್ರು. ಈ ರೀತಿಯ ಕೇಶವಿನ್ಯಾಸ ಬಹಳ ಸುಂದರವಾಗಿ ಕಾಣುತ್ತವೆ ಮತ್ತು ಇದು ವಧುವಿಗೆ ಪರಿಪೂ...