Bengaluru, ಏಪ್ರಿಲ್ 13 -- ಕಲರ್ಸ್‌ ಕನ್ನಡದ ಮಜಾ ಭಾರತ ಶೋ ಮೂಲಕ ಕರುನಾಡಿನ ಮನೆ ಮನಗಳನ್ನು ತಲುಪಿದವರು ಹಾಸ್ಯ ಕಲಾವಿದರಾದ ಜಗಪ್ಪ ಮತ್ತು ಸುಷ್ಮಿತಾ.

ಇದೀಗ ಇದೇ ಜೋಡಿ ದೂರದ ದುಬೈಗೆ ಹಾರಿದ್ದಾರೆ. ಅಲ್ಲಿನ ವಿಶೇಷ ಸ್ಥಳಗಳಿಗೆ ಭೇಟಿ ನೀಡಿ, ಆ ಕ್ಷಣಗಳ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಇಲ್ಲಿವೆ ಫೋಟೋಗಳು.

ಜೀ ಕನ್ನಡದ ಹಲವು ಭರ್ಜರಿ ಬ್ಯಾಚುಲರ್ಸ್‌ ಶೋನ ವಿನ್ನರ್‌ ಆಗಿದ್ದ ಜಗಪ್ಪ, ಅದಾದ ಬಳಿಕ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ನಲ್ಲಿಯೂ ಭಾಗವಹಿಸಿ ನಕ್ಕು ನಗಿಸಿದ್ದರು.

ದುಬೈನಲ್ಲಿನ ಬುರ್ಜ್‌ ಖಲೀಫಾ ಟವರ್‌ ಬಳಿ ಜೋಡಿಯಾಗಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಹೀಗೆ ಫೋಟೋ ಶೇರ್‌ ಮಾಡಿಕೊಳ್ಳುತ್ತಿದ್ದಂತೆ, ನೆಟ್ಟಿಗರಿಂದಲೂ ತರಹೇವಾರಿ ಮೆಚ್ಚುಗೆಯ ಕಾಮೆಂಟ್‌ಗಳು ಸಂದಾಯವಾಗಿವೆ.

ಸಾಮಾನ್ಯ ಕ್ಯಾಬ್‌ ಡ್ರೈವರ್‌ ಆಗಿದ್ದ ಜಗಪ್ಪ ಅವರೊಳಗಿನ ಅಸಲಿ ಟ್ಯಾಲೆಂಟ್‌ಗೆ ಸಾಣೆ ಹಿಡಿದಿದ್ದು ಮಜಾ ಭಾರತ ಅನ್ನೋ ಶೋ.

ಆ ಶೋ ಮೂಲಕ ನೇಮು, ಫೇಮು ಜತೆಗೆ ಮನಮೆಚ್ಚ...