Mysuru, ಜೂನ್ 27 -- ಹುಲಿಗಳ ಸಂರಕ್ಷಣೆಗೆಂದು ಪ್ರತೀ ರಾಜ್ಯಕ್ಕೆ ಪ್ರತ್ಯೇಕ ಹುಲಿ ಯೋಜನೆ, ಅದಕ್ಕೊಬ್ಬರು ಹಿರಿಯ ಐಎಫ್‌ಎಸ್‌ ಅಧಿಕಾರಿ. ನಿರ್ದೇಶಕರ ಹೆಸರಿನಲ್ಲಿ( ಎಫ್‌ಡಿಪಿಟಿ) ಅವರಿಗೊಂದು ಕಚೇರಿ, ವಾಹನ, ಇದಕ್ಕಾಗಿ ಸಿಬ್ಬಂದಿ, ಸೇವಕರು. ಮತ್ತೊಂದು ಕಡೆ ಹುಲಿ ಸಹಿತ ವನ್ಯಜೀವಿಗಳ ಬೇಟೆ, ಸಂಘರ್ಷ ತಡೆಗೆ ವಿಶೇಷ ಕಾರ್ಯಪಡೆ(ಎಸ್‌ಟಿಪಿಎಫ್‌). ಈ ಸೇವೆಗೆ ಅಧಿಕಾರಿಗಳು, ಸಿಬ್ಬಂದಿಗಳ ನೇಮಕ, ವಾಹನಗಳ ನಿಯೋಜನೆ, ಕಚೇರಿ ಸ್ಥಾಪನೆ ಸಹಿತ ಕೋಟಿಗಟ್ಟಲೇ ಖರ್ಚು. ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಡಿ ನಿರ್ವಹಣೆ ಮಾಡಿ ಹಣ ವೆಚ್ಚ ಮಾಡಿದರೂ ಅದರ ಸ್ಥಿತಿಯನ್ನು ಕೇಳಬೇಡಿ. ಕರ್ನಾಟಕದ ಹುಲಿ ಯೋಜನೆ ನಿರ್ದೇಶಕರ ಹುದ್ದೆ ಹಲ್ಲಿಲ್ಲದ ಹಾವಾಗಿ, ಬರೀ ಉತ್ಸವ ಮೂರ್ತಿಯಂತಾಗಿ ವರ್ಷಗಳೇ ಕಳೆಯಿತು. ವಿಶೇಷ ಕಾರ್ಯಪಡೆ ಅಧಿಕಾರಿಗಳು, ಸಿಬ್ಬಂದಿಗಳು ಕೆಲಸವೇ ಇಲ್ಲದ ಹುದ್ದೆಗೆ ಪ್ರತಿಷ್ಠಾಪನೆಗೊಂಡು ವರ್ಷಗಳಾಗುತ್ತ ಬಂದು. ಇದನ್ನು ಮಾಡಿದ ಉದ್ದೇಶವಾದರೂ ಏನು ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಇಲ್ಲ.

ಭಾರತದಲ್ಲೇ ಅತಿ ಹೆಚ್ಚು ಹುಲಿಗಳ ಟಾಪ...