Kolar, ಫೆಬ್ರವರಿ 15 -- ಕೋಲಾರ: ಅರಣ್ಯ ಒತ್ತುವರಿ ಪ್ರಕಣದಲ್ಲಿ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.‌ ರಮೇಶ್‌ ಕುಮಾರ್‌, ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಶ್ರೀನಿವಾಸಪುರ ವಲಯದ ಅರಣ್ಯಾಧಿಕಾರಿಗೆ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್ 1 ಮತ್ತು 2ರ ಅರಣ್ಯ ಜಮೀನಿನಲ್ಲಿ 60.23 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಜಂಟಿ ಸಮೀಕ್ಷೆ ತಂಡವು ಗುರುತಿಸಿ ವರದಿ ನೀಡಿದ ಬೆನ್ನಲ್ಲೇ ಮುಂದಿನ ಕ್ರಮಕ್ಕಾಗಿ ನೋಟಿಸ್‌ ನೀಡಿದ್ದಾರೆ. ಫೆಬ್ರವರಿ 20 ರ ಮಧ್ಯಾಹ್ನ 3 ಗಂಟೆಗೆ ಮೇಲ್ಮನವಿ ಪ್ರಾಧಿಕಾರದಿಂದ ಮೇಲ್ಮನವಿಯ ವಿಚಾರಣೆ ನಿಗದಿಪಡಿಸಿದ್ದು, ತಪ್ಪದೇ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ.

ರಿಟ್‌ ಅರ್ಜಿ ಪ್ರಕರಣದಲ್ಲಿ ಹೈಕೋರ್ಟ್‌ ಆದೇಶದಂತೆ ಮೇಲ್ಮನವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಮೋಜಣಿ ಕಾರ್ಯವು ಮುಕ್ತಾಯಗೊಂಡು ವರದಿ ಹಾಗೂ ನಕಾಶೆಯು ಸ್ವೀಕೃತವಾಗಿದೆ. ಈ ಹಿನ್ನೆಲೆಯಲ...