Mysuru, ಏಪ್ರಿಲ್ 20 -- ಮೈಸೂರಿನ ಎಸ್ಪಿ ಕಚೇರಿ ಬಳಿ 40 ಮರಗಳನ್ನು ಕಡಿದಿರುವುದನ್ನು ಖಂಡಿಸಿ ಭಾನುವಾರವೂ ಕೂಡ ಮುಂದುವರೆದ ಪ್ರತಿಭಟನೆ ಟೀಂ ಮೈಸೂರು ತಂಡದಿಂದ ಚಿತ್ರ ಬರೆಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಗಿದೆ.

ಮರ ಕಡಿತ ಸಮೀಪದಲ್ಲೇ ಮರದ ಚಿತ್ರಗಳನ್ನು ಬರೆಯುವ ಮೂಲಕ ಪ್ರತಿಭಟನೆಯನ್ನು ಮೈಸೂರಿನಲ್ಲಿ ದಾಖಲಿಸಲಾಗಿದೆ.

ಈಗಾಗಲೇ ವಿಶಾಲವಾಗಿರುವ ರಸ್ತೆಯನ್ನು ಮತ್ತಷ್ಟು ಅಗಲೀಕರಣ ಮಾಡಲು ರಾತ್ರೋರಾತ್ರಿ ಭಾರೀ ಮರಗಳನ್ನು ಮೈಸೂರಿನಲ್ಲಿ ಕಳೆದ ವಾರ ಕಡಿಯಲಾಗಿದೆ.

ಅರಣ್ಯ ಇಲಾಖೆಯು ಮರ ಕಡಿಯಲು ಅನುಮತಿ ನೀಡಿದ್ದು. ನಗರ ಪಾಲಿಕೆಯು ಗುತ್ತಿಗೆದಾರರಿಗೆ ಮರ ಕಡಿಯಲು ಅನುಮತಿ ನೀಡಿತ್ತು.

ಈಗಾಗಲೇ ಸಾಕಷ್ಟು ಮರಗಳನ್ನು ಕಡಿತ ಮಾಡಿದ್ದು. ಇನ್ನೂ ಕೆಲವು ಮರಗಳನ್ನು ಕಡಿಯಬಹುದು ಎನ್ನುವ ಆತಂಕವೂ ಇರುವುದರಿಂದ ಮೈಸೂರಿನಲ್ಲಿ ಹೋರಾಟ ತೀವ್ರಗೊಂಡಿದೆ.

ಮರಗಳನ್ನು ಕಡಿದಿರುವುದನ್ನು ಖಂಡಿಸಿ ಪರಿಸರವಾದಿಗಳು. ವಿವಿಧ ಸಂಘಟನೆಗಳವರು ಮೇಣದ ದೀಪ ಹಚ್ಚಿ ಪ್ರತಿಭಟನೆ ನಡೆಸಿದ್ದರು. ಈಗ ಚಿತ್ರ ಬಿಡಿಸುವ ಮೂಲಕವೂ ಆಕ್ರೋಶ ಹೊರ ಹಾಕ...