Bengaluru, ಏಪ್ರಿಲ್ 12 -- ಸುಧಾರಿತ ತಂತ್ರಜ್ಞಾನಗಳು ನಿತ್ಯ ಬದುಕಿನೊಳಗೆ ಸ್ಥಾನ ಪಡೆದುಕೊಳ್ಳುತ್ತ ಸಾಗುತ್ತಿರುವಾಗ ಮನುಷ್ಯರ ಬದುಕು ನಿತ್ಯವೂ ಎಂಬಂತೆ ಬದಲಾಗುತ್ತ ಸಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಾವು ಬಿಟ್ಟು ಬಂದ ಎಷ್ಟೋ ವಿಚಾರಗಳು ಈಗ ಮತ್ತೆ ಮುನ್ನೆಲೆಗೆ ಬರುತ್ತಿವೆ. ಇದೇ ವಿಚಾರವಾಗಿ ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರು ಗಮನಸೆಳೆದಿದ್ದು, ಯಾವುದೆಲ್ಲ ವಿಚಾರವನ್ನು ಅಯ್ಯೋ ಓಲ್ಡ್ ಫ್ಯಾಷನ್ ಎಂದು ಹೇಳುತ್ತ ಅಭಿವೃದ್ಧಿ ಹೆಸರಲ್ಲಿ ಬಿಟ್ಟು ಬಂದಿದ್ದೆವೋ ಅವೆವನ್ನೂ ಈಗ ಮರಳಿ ಅಪ್ಪುವ ಸಮಯ ಬಂದಾಯಿತು ಎಂಬುದನ್ನು ವಿವರಿಸಿದ್ದಾರೆ. ಇಲ್ಲಿದೆ ಅವರ ಅಭಿಮತ.

ನಿಮಗೆಲ್ಲಾ ಗೊತ್ತಿರಲಿ , 2035ರ ವೇಳೆಗೆ ಜಗತ್ತು ಪೂರ್ಣವಾಗಿ AI ತೆಕ್ಕೆಗೆ ಸಿಲುಕಿರುತ್ತದೆ. ಅವತ್ತಿಗೆ ಬದುಕಿನಲ್ಲಿ ಅತ್ಯಂತ ಪ್ರಮುಖ ಅಂಶವಾಗಿ ಉಳಿಯುವುದು ಉದ್ದೇಶ ಮಾತ್ರ ! ಅಂದರೆ ನಾವು ಪರ್ಪಸ್ ಎಂದು ಏನು ಹೇಳುತ್ತೇವೆ ಅದು. ಜೀವನಕ್ಕೊಂದು ಉದ್ದೇಶ ಈಗಾಗಲೇ ಇಲ್ಲವಾಗುತ್ತಿದೆ. ಹೆಚ್ಚುತ್ತಿರುವ ಖಿನ್ನತೆ (ಡಿಪ್ರೆಶನ್ ) ಇದಕ್ಕೊಂದು ತಾಜಾ ಉ...