ಭಾರತ, ಏಪ್ರಿಲ್ 17 -- ಒಟಿಟಿಗಳಲ್ಲಿ ಕನ್ನಡ ಒರಿಜಿನಲ್‌ ವೆಬ್‌ಸರಣಿಗಳು ಬರುತ್ತಿಲ್ಲ ಎಂಬ ದೂರು ಇದೆ. ಕನ್ನಡದಲ್ಲಿ ವೆಬ್‌ ಸರಣಿ ಮಾಡಿದರೆ ಅದನ್ನು ಒಟಿಟಿಗಳು ಖರೀದಿಸುತ್ತಿಲ್ಲ ಎಂಬ ಬೇಸರವೂ ಇದೆ. ಇದೇ ಕಾರಣದಿಂದ ರಕ್ಷಿತ್‌ ಶೆಟ್ಟಿ ತನ್ನ ಏಕಂ ವೆಬ್‌ ಸರಣಿಯನ್ನು ಸ್ವಂತ ವೆಬ್‌ಸೈಟ್‌ ನಿರ್ಮಿಸಿ ಜನರ ಜತೆ ಹಂಚಿಕೊಂಡಿದ್ದರು. ಕನ್ನಡ ವೆಬ್‌ ಸರಣಿ ವಿಭಾಗದಲ್ಲಿ ಇದೀಗ ಬದಲಾವಣೆಯ ಗಾಳಿ ಬೀಸುವಂತೆ ಇದೆ. ಏಕೆಂದರೆ, ಜೀ5ನ ಮೊದಲ ಕನ್ನಡ ವೆಬ್‌ ಸರಣಿ ಅಯ್ಯನ ಮನೆ ಏಪ್ರಿಲ್‌ 25ರಂದು ಸ್ಟ್ರೀಮಿಂಗ್‌ ಆಗಲಿದೆ. ರಮೇಶ್‌ ಇಂದಿರಾ ನಿರ್ದೇಶನದ ಈ ವೆಬ್‌ ಸರಣಿಯಲ್ಲಿ ಜನಪ್ರಿಯ ಕನ್ನಡ ಸೀರಿಯಲ್‌ ನಟಿ ಅಥವಾ ನಟರಿಗೆ ಅವಕಾಶ ನೀಡಿಲ್ಲ (ಹೀರೋ ಹೊರತುಪಡಿಸಿ) ಯಾಕೆ ಎನ್ನುವುದಕ್ಕೆ ನಿರ್ಮಾಪಕಿ ಶ್ರುತಿ ನಾಯ್ಡು ಕಾರಣ ನೀಡಿದ್ದಾರೆ. ಈ ವೆಬ್‌ ಸರಣಿಯಲ್ಲಿ ಒಲವಿನ ನಿಲ್ದಾಣ ಹೀರೋ ಅಕ್ಷಯ್‌ ನಾಯಕ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರೀಮಿಯರ್‌ ಪದ್ಮಿನಿ ಸಿನಿಮಾದ ಮೂಲಕ ಖ್ಯಾತಿ ಪಡೆದಿರುವ ಕನ್ನಡದ ಜನಪ್ರಿಯ ಸೀರಿಯಲ್‌ ನಿರ್ಮಾ...